ಕೃಷ್ಣ ನಗರಿ ಉಡುಪಿಯಲ್ಲಿ ಪಬ್ಲಿಕ್ ಫೈಲ್ ಪತ್ರಿಕೆಯ ವಿಭಿನ್ನ ಕಾರ್ಯಕ್ರಮ.. ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರ ಸಮಾಗಮ..

28 Jan 2025
ಸ್ಥಳೀಯ ಸುದ್ದಿ

ಆರು ತಿಂಗಳ ಪೂರ್ವ ತಯಾರಿ.. ಕಾರ್ಯಕ್ರಮದ ಪಕ್ಷಿ ನೋಟ..


ಪಬ್ಲಿಕ್ ಫೈಲ್ ಪತ್ರಿಕೆಯು ಸಾಧಕರ ಸಮಾಗಮದ ಕಾರ್ಯಕ್ರಮಕ್ಕೆ ಕಳೆದ ಆರು ತಿಂಗಳಿಂದಲೂ ನಿರಂತರವಾಗಿ ಪೂರ್ವ ತಯಾರಿಯಲ್ಲಿ ತೊಡಗಿಕೊಂಡಿದ್ದು ಸಾಧಕರನ್ನು ವಿಶೇಷವಾಗಿ ಗುರುತಿಸುವ ಮತ್ತು ಸಾಧಕರ ವಿವಿಧ ರೀತಿಯ ಸಾಧನೆಗಳನ್ನು ಮೆಲಕು ಹಾಕುವಂತಹ ನಿಟ್ಟಿನಲ್ಲಿ ಸಾಧಕರ ಶೋಧ ಎನ್ನುವಂತಹ ನಿಟ್ಟಿನಲ್ಲಿ ಚಿಕ್ಕದೊಂದು ಪೋಸ್ಟರ್ ಅನಾವರಣ ಮಾಡಿದ್ದು ರಾಜ್ಯದ ಮೂಲೆ ಮೂಲೆಗಳಿಂದಲೂ ಸುಮಾರು 250 ಕ್ಕೂ ಹೆಚ್ಚು ಸಾಧಕರು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು. ಸಮಯ ಮತ್ತು ಸ್ಥಳದ ಅಭಾವದಿಂದ ಸಾಧಕರುಗಳ ಸಂಖ್ಯೆಯನ್ನು ಬಟ್ಟಿ ಇಳಿಸುವ ಪ್ರಕ್ರಿಯೆಯನ್ನು ಆಡಳಿತ ಮಂಡಳಿ ಮಾಡಿತ್ತು. ಅದೇ ರೀತಿ ಸಾಧಕರನ್ನು ಭಟ್ಟಿ ಇಳಿಸಿ 65 ಜನ ಸಾಧಕರನ್ನು ಒಮ್ಮೆಲೇ ಪ್ರಶಸ್ತಿ ಪ್ರಧಾನಿಕೆ ಮಾಡುವ ಪ್ರಕ್ರಿಯೆಯನ್ನು ಕೈಗೊಂಡಿತು. ಪಬ್ಲಿಕ್ ಫೈಲ್ ಪ್ರಥಮ ವರ್ಷದಲ್ಲಿ 35 ಜನರ ಸಾಧಕರನ್ನು ಗುರುತಿಸಿದ್ದ ಹಂಬಲ ನಮ್ಮೊಂದಿಗೆ ಜೋಪಾನವಾಗಿತ್ತು ಅದೇ ರೀತಿ 65 ಸಾಧಕರನ್ನು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ವಿಶೇಷ ರೀತಿಯಲ್ಲಿ ಗುರುತಿಸಿ ಸತ್ಕರಿಸುವ ಮೂಲಕ ಸನ್ಮಾನ ನೆರವೇರಿಸಲಾಯಿತು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಧಕರು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದ ಆವರಣದಲ್ಲಿ ಸೇರಿದ್ದರು. ಒಂದೆಡೆ ಸಾಹಿತ್ಯದ ಹೂರಣವಾಗಿರುವ ಪಬ್ಲಿಕ್ ಫೈಲ್ ಪತ್ರಿಕೆಯ ಕಾರ್ಯಕ್ರಮಕ್ಕೆ ಓದುಗರ ದಂಡೇ ನೆರದಿತ್ತು.. ಕಾರ್ಯಕ್ರಮದಲ್ಲಿ ಚಂಡೆ ವಾದನ ಮೊಳಗುತ್ತಿತ್ತು.. ಕಾರ್ಯಕ್ರಮದಲ್ಲಿ ಅತಿಥಿ ಮೊಹೋನ್ಯತರೂ ಸರಿಯಾದ ಸಮಯಕ್ಕೆ ಆಗಮಿಸಿ 10 ಗಂಟೆ 46 ನಿಮಿಷಕ್ಕೆ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಬ್ಲಿಕ್ ಫೈಲ್ ಪತ್ರಿಕೆಯ ಎರಡನೇ ವರ್ಷದ ಸಾಧಕರ ಸಮಾಗಮ ಕಾರ್ಯಕ್ರಮ ರಾಜ್ಯದ ಜನರಿಗೆ ಮಾದರಿಯಾಯಿತು. ಪತ್ರಿಕೆಯಲ್ಲಿ ಪ್ರಸಾರವಾಗುವ ವಿವಿಧ ಕಾರ್ಯಕ್ರಮಗಳು ಅಂಶಗಳು ಜನರನ್ನು ಮತ್ತೆ ನೆನಪಿಸುವಂತೆ ಮಾಡಿದೆ. ಪತ್ರಿಕೆಯ 2 ನೇ ಪುಟದಲ್ಲಿ ಪ್ರಕಟವಾಗುತ್ತಿರುವ ಸಮುದಾಯದ ಪುಟದ ನೆನಪು, ಕಾರ್ಯಕ್ರಮದಲ್ಲಿ ಜನರನ್ನು ಮತ್ತೊಮ್ಮೆ ನೆನಪಿನಾಳದಲ್ಲಿ ಹುದುಗಿ ಹಾಕಿದ್ದು, ಬಹಳ ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಪಬ್ಲಿಕ್ ಫೈಲ್ ವೆಬ್‌ಸೈಟ್‌ ನ್ನು ಅನಾವರಣ ಮಾಡಿದ ಅತಿಥಿಗಳು ಕಾರ್ಯಕ್ರಮ ಸಾಂಗವಾಗಿ ನೆರವೇರಿಸಿದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸಂಪಾದಕರ ತಾಯಿಯವರಿಗೆ ಅವರಿಗೆ ಮೊದಲ ಸನ್ಮಾನ ಮಾಡಲಾಯಿತು. ಮಾತೃದೇವೋಭವ.. ಪಿತೃ ದೇವೋಭವ.. ಎನ್ನುವ ಸಾರಾಂಶದೊಂದಿಗೆ ತಮ್ಮ ತಾಯಿಯವರ ಗುಣಗಾನ ಮಾಡಿದ ಸಂಪಾದಕರಾದ ಎಂ.ಎನ್.ಕೊಟ್ಟಾರಿಯವರು ತಮ್ಮ ಬಾಲ್ಯದ ನೆನಪುಗಳು ಮತ್ತು ತಮ್ಮ ತಾಯಿ ಮತ್ತು ಮಗನ ಬಾಂಧವ್ಯವನ್ನು ವೇದಿಕೆಯಲ್ಲಿ ವೀಕ್ಷಕರೊಂದಿಗೆ ಹಂಚಿಕೊಂಡರು.. ಪಬ್ಲಿಕ್ ಫೈಲ್ ಪತ್ರಿಕೆಯ ಸಾಧಕರುಗಳ ಮತ್ತು ಅವರ ಕುಟುಂಬದ ಇತರರು, ಓದುಗರಿಂದ ಕಾರ್ಯಕ್ರಮದ ಸಭಾಂಗಣ ತುಂಬಿ ತುಳುಕುತ್ತಿತ್ತು. ಸಭಾಂಗಣದಲ್ಲಿ ಎಲ್ಲರೂ ವೇದಿಕೆಯ ಮುಂಬಾಗದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುವುದರಲ್ಲಿ ತಲ್ಲೀನರಾಗಿದ್ದರು. ಪತ್ರಿಕೆಯ ಆರು ತಿಂಗಳ ತಯಾರಿ ಹಾಗೂ ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ದಪಡಿಸುವಲ್ಲಿ ಆಡಳಿತ ಮಂಡಳಿ ಹಾಗೂ ಸಮಸ್ತ ಪಬ್ಲಿಕ್ ಫೈಲ್ ಬಳಗ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು ಇನ್ನೊಂದು ವಿಶೇಷವಾಗಿತ್ತು. ಪಬ್ಲಿಕ್ ಫೈಲ್ ಪತ್ರಿಕೆ ಸಾಧಕರ ಸಮಾಗಮ ಕಾರ್ಯಕ್ರಮ ಕೃಷ್ಣ ನಗರಿ ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಿತು..ರಾಜ್ಯದ ವಿವಿದ ಜಿಲ್ಲೆಗಳಿಂದ ಆಗಮಿಸಿದಂತಹ ಸಾಧಕರುಗಳ ಕಣ್ಣಲ್ಲಿ ಆನಂದ ಭಾಷ್ಯ.. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಸಾಧನೆಯ ಹಾದಿಯಲ್ಲಿ ಪತ್ರಿಕೋದ್ಯಮದ ಪತ್ರಕರ್ತರುಗಳು ಸಮಾಜಮುಖಿ ಚಿಂತನೆಯ ಬೆಳೆಸಿಕೊಳ್ಳುವಲ್ಲಿ ಸಾರ್ವಜನಿಕರ ಮತ್ತು ಪತ್ರಿಕೆಯ ನಡುವೆ ಸಂಪರ್ಕ ಸೇತುವೆ ಆಯ್ತು.. ಇತರೆ ಪತ್ರಿಕೆಗಳ ಸಂಪಾದಕರು, ಸಾಧಕರು, ಕಾರ್ಯಕ್ರಮದಲ್ಲಿ ಸಂತಸದಿಂದ ಭಾಗವಹಿಸಿದ್ದು ಸಂಭ್ರಮವೆನಿಸಿತು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಮತ್ತು ಕರಾವಳಿಯಲ್ಲಿ 65 ಜನರನ್ನು ಸನ್ಮಾನಿಸಿ ಅವರಿಗೆ ವಿಶೇಷ ರೀತಿಯ ಪುರಸ್ಕಾರಗಳನ್ನು ನೀಡಲಾಗಿದ್ದು ಇದೇ ಮೊದಲು.. ಪಬ್ಲಿಕ್ ಫೈಲ್ ಪತ್ರಿಕಾ ಸಂಸ್ಥೆ ಇನ್ನಷ್ಟು ಕಾರ್ಯಕ್ರಮಗಳಿಗೆ ನಾಂದಿ ಹಾಡುವುದರ ಮೂಲಕ ಎರಡನೇ ವರ್ಷದ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವಲ್ಲಿ ಕಟ್ಟು ಬದ್ಧರಾದ ಸಿಬ್ಬಂದಿಗಳು, ಓದುಗರು ಮತ್ತು ಸಮಸ್ತರಿಗೆ ಧನ್ಯವಾದಗಳು ಸಲ್ಲಿಸಿತು..

ಎರಡನೇ ವರ್ಷದ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.


ಕಾರ್ಯಕ್ರಮದಲ್ಲಿ ಸಹ ಭೋಜನ..


ಪಬ್ಲಿಕ್ ಫೈಲ್ ಸಾಧಕರ ಸಮಾಗಮ ಕಾರ್ಯಕ್ರಮದಲ್ಲಿ ಎಲ್ಲಾ ಸಾಧಕರಿಗೆ ಸಾರ್ವಜನಿಕರಿಗೆ ಸಹಭೋಜನವನ್ನು ಏರ್ಪಡಿಸಲಾಗಿತ್ತು. ಸಾಧಕರೆಲ್ಲರೂ ಬಹು ದೂರದಿಂದ ಆಗಮಿಸಿರುವುದರಿಂದ ಅವರಿಗೆ ಬೆಳಗಿನ ಉಪಹಾರ, ಮತ್ತು ಮಧ್ಯಾಹ್ನದಲ್ಲಿ ಸಹ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು. ಸಾಧಕರು ವಿಶೇಷ ರೀತಿಯ ಊಟ ಉಪಚಾರಗಳ ಸವಿದು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಸಾಧಕರು ಮತ್ತು ಅತಿಥಿ ಗಣ್ಯರು ರುಚಿ ರುಚಿಯಾದಂತಹ ಭೋಜನವನ್ನು ಸವಿದು ಸಂಭ್ರಮಿಸಿದರು. ಆಗಮಿಸಿದಂತಹ ಎಲ್ಲ ಸಾಧಕರು ಪಬ್ಲಿಕ್ ಫೈಲ್ ಪತ್ರಿಕೆಯ ಬಗ್ಗೆ ಉತ್ತಮ ಮಾತುಗಳು ನುಡಿದು ಪತ್ರಿಕೆಗೆ ಶುಭ ಹಾರೈಸಿದರು.


ಪತ್ರಿಕಾ ವರದಿಗಳು ಸಮಾಜವನ್ನು ಎಚ್ಚರಿಸುವಂತಿರಬೇಕು.. ಸಮಾಜಮುಖಿ ಕಾರ್ಯದಲ್ಲಿ ಪಬ್ಲಿಕ್ ಫೈಲ್ ಪ್ರಸ್ತುತ ಉತ್ತಮ ಕಾರ್ಯ ನಿರ್ವಹಿಸುತ್ತಿದೆ... ರಾಜಕಾರಣಿಗಳ ನೀತಿ ಧೋರಣೆಗೆ ಪತ್ರಿಕೆ ಎಂದಿಗೂ ತಲೆತಗ್ಗಿಸಬಾರದು, ಸಮಾಜದ ಆಂತರಿಕ ಸಮಸ್ಯೆಯನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪತ್ರಿಕೆ ಸದಾ ಸನ್ನದ್ಧವಾಗಬೇಕು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಹ್ಯೂಮನ್ ರೈಟ್ಸ್ ನ ರಾಧ ಕೊಲ್ಲಿಯವರು ಹಿತನುಡಿ.. ನುಡಿದರು

ಪಬ್ಲಿಕ್ ಫೈಲ್ ಪತ್ರಿಕೆಯ ಸಾಧಕರ ಸಮಾಗಮ - 2025 ಕಾರ್ಯಕ್ರಮದ ಸಂಪನ್ನ ಪ್ರಧಾನ ವೇದಿಕೆಯಲ್ಲಿ 65 ಜನ ಸಾಧಕರಿಗೆ ಅಭೂತಪೂರ್ವ ಅಭಿನಂದನೆಯ ಕ್ಷಣಗಳು ಮತ್ತು ಮಾತ್ರವಂದನ ಮತ್ತು ವಿದ್ಯಾನಿಧಿ ಸಹಾಯ ಹಸ್ತ ವಿತರಣೆ.. ಕಾರ್ಯಕ್ರಮಗಳು ಮತ್ತು ಹುತಾತ್ಮ ಯೋಧ ಬೀಜಾಡಿಯ ಅನುಪ್ ಪೂಜಾರಿ ಅವರಿಗೆ ಗೌರವ ಸ್ಮರಣೆ ಅರ್ಪಣೆ.... ನಡೆದದ್ದು ಕಾರ್ಯಕ್ರಮದ ಮುಖ್ಯಾಂಶಗಳು.


ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಪಬ್ಲಿಕ್ ಫೈಲ್ ನ್ಯೂಸ್ ನೆಟ್ ವರ್ಕ್ ಅರ್ಪಿಸುವ ದ್ವಿತೀಯ ವರ್ಷದ ಹೆಜ್ಜೆ ಗುರುತು ಎನ್ನುವ ಈ ವಿಶಿಷ್ಟ ಸಾಧಕರ ಸಮಾಗಮ 2025 ಕಾರ್ಯಕ್ರಮ ಸಂಪನ್ನವಾಗಿ ನಡೆದದ್ದು ಇತ್ತೀಚಿಗೆ ಉಡುಪಿ ಜಿಲ್ಲೆಯ ಯಕ್ಷಗಾನ ಕಲಾರಂಗ, ಇನ್ಫೋಸಿಸ್ ಫೌಂಡೇಶನ್ ನ ಹವಾ ನಿಯಂತ್ರಿತ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಗಣೇಶ ಸ್ತುತಿಯೊಂದಿಗೆ ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಸನ್ಮಾನಿತರು ಹಾಗೂ ಮೊದಲಿಗೆ ಪತ್ರಿಕಾ ಸಂಪಾದಕ ಕೊಟ್ಟಾರಿಯವರ ತಾಯಿಯವರನ್ನು ಅಭಿನಂದಿಸಿ ಗೌರವಿಸಲಾಯಿತು. ತದನಂತರದಲ್ಲಿ ಸಂಪಾದಕರ ಆತ್ಮೀಯ ಗೆಳೆಯರು, ಪತ್ರಿಕೆಯ ಶ್ರೇಯೋಭಿಲಾಷಿ ಆಪತ್ಬಾಂಧವ ಶ್ರೀ ಸುರೇಶ್ ಕುಲಾಲ್ ಇವರನ್ನು ಅಭಿನಂದಿಸಲಾಯಿತು.


ಇನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಅಸೋಸಿಯೇಷನ್ (ರಿ.) ನವದೆಹಲಿಯ ಶ್ರೀಮತಿ ರಾಧಾ ಕೊಲ್ಲಿ ಅವರು ಮಾತನಾಡುತ್ತಾ "ಪತ್ರಿಕಾ ವರದಿಗಳು ಸಮಾಜವನ್ನು ಎಚ್ಚರಿಸುವಂತಿರಬೇಕು.., ಸಮಾಜಮುಖಿ ಕಾರ್ಯದಲ್ಲಿ ಪಬ್ಲಿಕ್ ಫೈಲ್ ಪತ್ರಿಕೆ ಪ್ರಸ್ತುತ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ರಾಜಕಾರಣಿಗಳ ಅನೀತಿ ಧೋರಣೆಗೆ ಪತ್ರಿಕೆ ತಲೆ ತಗ್ಗಿಸಬಾರದು, ಸಮಾಜದ ಆಂತರಿಕ ಸಮಸ್ಯೆಯನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪತ್ರಿಕೆ ಸದಾ ಸನ್ನದ್ಧವಾಗಬೇಕು ಎಂದ ಅವರು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿ ತಮ್ಮ ಹಿತನುಡಿ ನುಡಿದರು.


"ಪತ್ರಿಕೆಗಳು ಸಮಾಜದ ಆಸ್ತಿ ಮತ್ತು ಪತ್ರಿಕಾ ವರದಿಗಳಿಂದ ಸಮಾಜದ ವಾಸ್ತವ್ಯವನ್ನು ಕಂಡು ಹಿಡಿಯುವಲ್ಲಿ ಪ್ರೇರಕ ಶಕ್ತಿಯಾಗಿ ನಿಲ್ಲುತ್ತದೆ. ಪತ್ರಿಕೆಗಳು ಸಮಾಜದ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ" ಪತ್ರಿಕೋದ್ಯಮ ಧರ್ಮವನ್ನು ಪಬ್ಲಿಕ್ ಫೈಲ್ ಪತ್ರಿಕೆ‌ ಉತ್ತಮವಾಗಿ ಪಾಲಿಸುತ್ತಿದೆ. ವಸ್ತುನಿಷ್ಠ ವರದಿಗಳು ಸಮಾಜದ ಕಣ್ತೆರೆಸುವಂತಿರಬೇಕು, ಆಗ ಮಾತ್ರ ಸುಂದರವಾದ ಪತ್ರಿಕೋದ್ಯಮ ಸಮಾಜದಲ್ಲಿ ಅರಳಲು ಸಾಧ್ಯ ಎಂದು ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ದಿನಕರ್ ಹೇರೂರು ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ, ಇವರು ತಮ್ಮ ಉದ್ಘಾಟನೆಯ ಭಾಷಣದಲ್ಲಿ ಹೇಳಿದರು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪಬ್ಲಿಕ್ ಫೈಲ್ ಪತ್ರಿಕೆಯ ಗೌರವ ಸಂಪಾದಕರಾದ ಶ್ರೀ ಸತೀಶ್ ಶೆಟ್ಟಿ ಮುಟ್ಲುಪಾಡಿ ನಿರ್ವಹಿಸಿದರು. ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಸುದ್ದಿ ಮನೆ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಶ್ರೀ ಗುರುರಾಜ್ ಪಿ. ಆರ್. ತಹಶೀಲ್ದಾರರು, ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಉಡುಪಿ ಇವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಶ್ರೀಮತಿ ರಾಧ ಕೊಲ್ಲಿ, ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಅಸೋಸಿಯೇಷನ್, ನವ ದೆಹಲಿ ಹಾಗೂ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಎಂ. ಎನ್. ಕೊಟ್ಟಾರಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಮಧುಸೂದನ್ ನಾಯಕ್, ನಿವ್ರತ್ತ ಉಡುಪಿ ಜಿಲ್ಲಾಧಿಕಾರಿಗಳು, ಮತ್ತು ಮೂಳೆ ಶಸ್ತ್ರ ಚಿಕಿತ್ಸಾ ತಜ್ಞರಾದ ಶ್ರೀ ಸುದೇಶ್ ಕುಮಾರ್, ಸಂಪಾದಕರು ಕರಾವಳಿ ಮಾರುತ ಪತ್ರಿಕೆ, ಮಂಗಳೂರು, ಶ್ರೀ ಶಿವಪ್ರಸಾದ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಕಲ್ಲಡ್ಕ, ಬಂಟ್ವಾಳ, ಶ್ರೀ ಬೋಳ ಪ್ರಶಾಂತ್ ಕಾಮತ್, ಉದ್ಯಮಿಗಳು ಕಾರ್ಕಳ, ಶ್ರೀ ನೀಲಾವರ ಸುರೇಂದ್ರ ಅಡಿಗ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಶ್ರೀ ರವಿ ಕಟ್ಪಾಡಿ ಸಮಾಜ ಸೇವಕರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಶ್ರೀ ಸೀತಾರಾಮ ಹೆಗ್ಗಡೆ ಮಂಡಾಡಿ ಮನೆ, ನಿವೃತ್ತ ಬ್ಯಾಂಕ್ ಉದ್ಯೋಗಿ, ಶ್ರೀ ಶ್ಯಾಮ ಸುಂದರ್, ಸಾಲಿಗ್ರಾಮ, ಕಾನೂನು ಸಲಹೆಗಾರರು ಪಬ್ಲಿಕ್ ಫೈಲ್ ಪತ್ರಿಕೆ, ಶ್ರೀ ರಾಘವೇಂದ್ರ ಮಯ್ಯ ಹಾಲಾಡಿ ಖ್ಯಾತ ಯಕ್ಷಗಾನ ಭಾಗವತರು, ಶ್ರೀ ರಾಜಶೇಖರ್ ಕೆ. ಸುದ್ದಿ ಸಂಪಾದಕರು, ಪಬ್ಲಿಕ್ ಫೈಲ್ ಪತ್ರಿಕೆ ಬೆಂಗಳೂರು ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 65 ಜನ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮವನ್ನು ಬಿ.ಅಣ್ಣಪ್ಪ ಕುಲಾಲ್, ಗೌರವ ಸಲಹೆಗಾರರು ಪಬ್ಲಿಕ್ ಫೈಲ್ ಪತ್ರಿಕೆ ಉಡುಪಿ ಇವರು ಸ್ವಾಗತಿಸಿದರು. ಪತ್ರಿಕೆಯ ರಾಜ್ಯ ವಿಶೇಷ ಪ್ರಧಾನ ವರದಿಗಾರರಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ವರದಿ ವಾಚನ ನೆರವೇರಿಸಿದರು ಉಡುಪಿ ಜಿಲ್ಲಾ ವರದಿಗಾರ ಅಮರನಾಥ ಹೆಗ್ಗಡೆ ಸಾಧನೆಯ ಹಾದಿಯ ವರದಿ ವಾಚಿಸಿದರು. ಪತ್ರಿಕೆಯ ಆಡಳಿತ ಮಂಡಳಿ ನಿರ್ದೇಶಕಿ ಶ್ರೀಮತಿ ಪವಿತ್ರ ಶೆಟ್ಟಿ, ಸಹ ನಿರೂಪಣೆಯಲ್ಲಿ ಶ್ರೀ ಲತಾ ಸಂತೋಷ್ ಶೆಟ್ಟಿ ಮುದ್ದು ಮನೆ, ಪ್ರಾಸ್ತಾವಿಕ ನುಡಿಯನ್ನು ಪತ್ರಿಕೆಯ ಸಂಪಾದಕರಾದ ಎಂ. ಎನ್. ಕೊಟ್ಟಾರಿಯವರು ನೆರವೇರಿಸಿದರು. ಪತ್ರಿಕೆಯ ರಾಜ್ಯದ ವಿಶೇಷ ಪ್ರಧಾನ ವರದಿಗಾರರಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಈ ಕಾರ್ಯಕ್ರಮ ನಿರೂಪಿಸಿದರು. ಪಬ್ಲಿಕ್ ಫೈಲ್ ಪತ್ರಿಕೆಯ ಕುಂದಾಪುರ ತಾಲೂಕು ವರದಿಗಾರರಾದ ದೇವೇಂದ್ರ ಸುವರ್ಣ ವಂದನಾರ್ಪಣೆ ಮಾಡಿದರು..ಸನ್ಮಾನ ಕಾರ್ಯಕ್ರಮದ ನಂತರ ಭೋಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು..



ವೇದಿಕೆಯಲ್ಲಿ ಅಸೀನರಾಗಿದ್ದ ಗಣ್ಯರಿಗೆಲ್ಲರಿಗೂ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಸಂಪಾದಕರಾದ ಎಂ.ಎನ್. ಕೊಟ್ಟಾರಿಯವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ ತಾವು ನಡೆದು ಬಂದ ಹಾದಿ ಮತ್ತು ತಮ್ಮ ಪತ್ರಿಕೆಯ ಎರಡು ವರ್ಷಗಳ ಸಾಧನೆ, ಹಾಗೂ ಕಷ್ಟ ನಷ್ಟಗಳನ್ನು ಮೀರಿ ನಿಂತು ದ್ವಿತೀಯ ವಾರ್ಷಿಕೋತ್ಸವದ ಸಾಧಕರ ಸಮಾಗಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಬಗೆ ವಿವರಿಸಿದರು.. ಆರಂಭದ ದಿನಗಳಿಂದಲೂ ತಮ್ಮ ಪತ್ರಿಕೆಗೆ ಬೆನ್ನೆಲುಬಾಗಿ ನಿಂತು ತಮ್ಮ ಪತ್ರಿಕೆಯ ಲೋಪ ದೋಷಗಳನ್ನು ತಿದ್ದುತ್ತಾ ಪತ್ರಿಕೆಯ ಮಾರ್ಗದರ್ಶಕರಾಗಿ ಸುದ್ದಿ ಸಂಪಾದಕರಾಗಿರುವ ಮತ್ತು ತಮಗೆ ಗುರು ಸಮಾನರಾದ ರಾಜ ಶೇಖರ್ ರವರನ್ನು ಗೌರವ ಪೂರ್ವಕವಾಗಿ ಸ್ಮರಿಸಿಕೊಳ್ಳುತ್ತಾ ಅವರಿಗೆ "ಸುದ್ದಿ ಸಾಮ್ರಾಟ್ " ಎಂಬ ಬಿರುದು ನೀಡಿ ಆತ್ಮೀಯವಾಗಿ ಗೌರವಿಸಿದರು.. ಹಾಗೆಯೇ ಮತ್ತೊಬ್ಬ ಪ್ರಮುಖ ವ್ಯಕ್ತಿ ಪತ್ರಿಕೆಯ ರಾಜ್ಯದ ಪ್ರಧಾನ ಸಂಪಾದಕರಾದ ಸಂತೋಷ್ ಶೆಟ್ಟಿಯವರ ಸಹಕಾರವನ್ನು ಸಹ ಮುಕ್ತ ಕಂಠದಿಂದ ಹೊಗಳಿದರು..ಇನ್ನು ಈ ಕಾರ್ಯಕ್ರಮಕ್ಕೆ ದೂರದ ಮುಂಬಯಿಯಿಂದ ಬಂದ ಪತ್ರಿಕಾ ಅಂಕಣಗಾರ್ತಿ, ಬಹಗಾರರಾದ ಶ್ರೀಮತಿ ಲತಾ ಶೆಟ್ಟಿ ಮುದ್ದಿನ ಮನೆ, ಹಾವೇರಿ ಜಿಲ್ಲಾ ವರದಿಗಾರರಾದ ಬಿ.ಎಸ್. ಅಪ್ಪಣ್ಣನವರ್ ಮತ್ತು ಕುಂದಾಪುರ ವರದಿಗಾರರಾದ ಧರ್ಮೇಂದ್ರ ಪೂಜಾರಿ, ಬ್ರಹ್ಮಾವರ ವರದಿಗಾರರಾದ ಅಮರನಾಥ ಹೆಗ್ಗಡೆ ಹಾಗು ಪಬ್ಲಿಕ್ ಫೈಲ್ ಪತ್ರಿಕೆಯ ಇತರೆ ಎಲ್ಲಾ ಸಿಬ್ಬಂದಿಗಳನ್ನು ಸಹ ಸಮಾರಂಭದಲ್ಲಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು..ವಿಶೇಷವಾಗಿ ಬೆಳಗಿನಿಂದ ಸಂಜೆಯವರೆಗೂ ತಮ್ಮ ವಿಶಿಷ್ಟ ನಿರೂಪಣೆಯ ಮೂಲಕ ಮತ್ತು ವೈಶಿಷ್ಟ್ಯಪೂರ್ಣ ಮಾತುಗಳ ಮೂಲಕ ಕಾರ್ಯಕ್ರಮವನ್ನು ನಿರೂಪಿಸಿದ ಸಂತೋಷ್ ಶೆಟ್ಟಿಯವರು ಈ ಕಾರ್ಯಕ್ರಮಕ್ಕೆ ಮೆರುಗು ತಂದರು.. ಹಾಗೆಯೇ ಆಡಳಿತ ಮಂಡಳಿ ಮುಖ್ಯಸ್ಥೆ ಪವಿತ್ರಾ ಶೆಟ್ಟಿ ,ಲತಾ ಶೆಟ್ಟಿ, ಸಹ ವೇಧಿಕೆಯಲ್ಲಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಿದರು.. ಅಲ್ಲದೆ ವೇದಿಕೆಯ ರಂಗ ಸಜ್ಜಿಕೆ, ಬೆಳಕು ನಿರ್ವಹಣೆ ಮತ್ತು ಮುಖ್ಯವಾಗಿ ಚಂಡೆ ವಾದಕರಾಗಿ ಬಂದ ಯುವಕರ ತಂಡಕ್ಕೂ ಹಾಗೂ ಈ ಯಶಸ್ವಿ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗು ನಮ್ಮ ಪಬ್ಲಿಕ್ ಫೈಲ್ ಪತ್ರಿಕೆ ವಿನಯಪೂರ್ಕಕವಾಗಿ ಅಭಿನಂದನೆ ಸಲ್ಲಿಸುತ್ತದೆ..

Recently Updated:

ಉಡುಪಿ ತಾಲೂಕು ಕಛೇರಿ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ.! ಉಡುಪಿ ತಾಲೂಕು ಕಚೇರಿಯಂತಹ ಪ್ರಮುಖ ಸಾರ್ವಜನಿಕ ಸ್ಥಳದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವುದಲ್ಲದೆ, ದುರ್ವಾಸನೆ ಮತ್ತು ರೋಗ ಹರಡುವ ಭೀತಿಯನ್ನು ಹಉಡುಪಿ ತಾಲೂಕು ಕಛೇರಿ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ.! ಉಡುಪಿ ತಾಲೂಕು ಕಚೇರಿಯಂತಹ ಪ್ರಮುಖ ಸಾರ್ವಜನಿಕ ಸ್ಥಳದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವುದಲ್ಲದೆ, ದುರ್ವಾಸನೆ ಮತ್ತು ರೋಗ ಹರಡುವ ಭೀತಿಯನ್ನು ಹ
ಕಲಿಕೆ ಜೊತೆಗೆ ಕೌಶಲವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆ ಮೊಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಕಲಿಕೆ ಜೊತೆಗೆ ಕೌಶಲವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆ ಮೊಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಕಲ್ಲಡ್ಕ ಕೆ ಸಿ ರೋಡಿನಲ್ಲಿ ಹಗಲಿನಲ್ಲೇ ಉರಿಯುತ್ತಿರುವ ಬೀದಿ ದೀಪ.ಕಲ್ಲಡ್ಕ ಕೆ ಸಿ ರೋಡಿನಲ್ಲಿ ಹಗಲಿನಲ್ಲೇ ಉರಿಯುತ್ತಿರುವ ಬೀದಿ ದೀಪ.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮನೆಯ ಹತ್ತಿರದ ಸೋಲಾರ್ ದಾರಿ ದೀಪ ಕಳ್ಳತನ.! ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮನೆಯ ಹತ್ತಿರದ ಸೋಲಾರ್ ದಾರಿ ದೀಪ ಕಳ್ಳತನ.!
ಆದಾಯದ ಹೆಸರಿನಲ್ಲಿ ಪರಿಸರ ನಾಶ ಅದೆಷ್ಟು ಸರಿ.!? ಕಾಡಿಗೆ ಬೀಳದಿರಲಿ ಕೊಡಲಿ..!!ಆದಾಯದ ಹೆಸರಿನಲ್ಲಿ ಪರಿಸರ ನಾಶ ಅದೆಷ್ಟು ಸರಿ.!? ಕಾಡಿಗೆ ಬೀಳದಿರಲಿ ಕೊಡಲಿ..!!
ಅಕ್ರಮ ಮದ್ಯ ಮಾರಾಟ ಸಕ್ರಮ.! ಅಬಕಾರಿ,ಪೋಲಿಸು ಪಾಪದ ಪಾಲಿನ ಮಿತ್ರಮ..!?  ಕೂಡ್ಲಿಗಿಯಲ್ಲಿ ಅಕ್ರಮ ಮದ್ಯ ಮಾರಾಟದ ಗೋಳು.!? ಯುವಜನರ ಭವಿಷ್ಯ ಹಾಳು.!?ಅಕ್ರಮ ಮದ್ಯ ಮಾರಾಟ ಸಕ್ರಮ.! ಅಬಕಾರಿ,ಪೋಲಿಸು ಪಾಪದ ಪಾಲಿನ ಮಿತ್ರಮ..!? ಕೂಡ್ಲಿಗಿಯಲ್ಲಿ ಅಕ್ರಮ ಮದ್ಯ ಮಾರಾಟದ ಗೋಳು.!? ಯುವಜನರ ಭವಿಷ್ಯ ಹಾಳು.!?
ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗಿಲ್ಲ ಮೂಲ ಸೌಕರ್ಯ.!? ಶೀಘ್ರ ಸೌಲಭ್ಯ ಒದಗಿಸದಿದ್ದರೆ ಹೋರಾಟ-ರೈತ ಮುಖಂಡರ ಎಚ್ಚರಿಕೆ..!!ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗಿಲ್ಲ ಮೂಲ ಸೌಕರ್ಯ.!? ಶೀಘ್ರ ಸೌಲಭ್ಯ ಒದಗಿಸದಿದ್ದರೆ ಹೋರಾಟ-ರೈತ ಮುಖಂಡರ ಎಚ್ಚರಿಕೆ..!!
ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಶ್ಲಾಘನೀಯ ಸೇವಾ ಪದಕ.ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಶ್ಲಾಘನೀಯ ಸೇವಾ ಪದಕ.
ಬ್ರಹ್ಮಾವರ: ಕಾಡು ಪ್ರಾಣಿಗಳ ಬೇಟೆಗೆ ಯತ್ನ: ಭಟ್ಕಳ ಮೂಲದ ಮೂವರ ಬಂಧನ. ಬ್ರಹ್ಮಾವರ: ಕಾಡು ಪ್ರಾಣಿಗಳ ಬೇಟೆಗೆ ಯತ್ನ: ಭಟ್ಕಳ ಮೂಲದ ಮೂವರ ಬಂಧನ.