ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯ ಪಕ್ಕದಲ್ಲಿರುವ ಕೊಡಚಾದ್ರಿ ನಿಲುವಿಗೆ "ರೋಪ್ ವೇ" ನಿರ್ಮಾಣ ಮಾಡುವ ಕಾಮಗಾರಿಗಳು ಬಹಳಷ್ಟು ವರುಷಗಳಿಂದ ಕಾಮಗಾರಿ ನಿರ್ಮಾಣ ಹಂತದ ಸಭೆಗಳು ನಡೆಯುತ್ತಿದ್ದು, ಕೇಂದ್ರದ ಆಡಳಿತರೂಢ ಸರ್ಕಾರಗಳು ಸ್ಥಳಕ್ಕೆ ಆಗಮಿಸಿ, ಸ್ಥಳದ ಪರಿಶೀಲನೆಯನ್ನು ಕೂಡ ನಡೆಸಿದೆ. ಅದರಂತೆ "ರೋಪ್ ವೇ" ನಿರ್ಮಾಣ ಮಾಡುವ ಕಾಮಗಾರಿಗಳು ಅಲ್ಲಿನ ಜನ ವಿರೋಧಿ ಕೆಲಸಗಳ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಒಂದೆಡೆ ಅಭಿವ್ಯಕ್ತ ಪಡಿಸಿದರೆ, ಇನ್ನೊಂದು ಕಡೆ ಸರ್ಕಾರ ಮತ್ತು ಸರ್ಕಾರದ ಆಡಳಿತ ಜನರನ್ನು ಮುಟ್ಟುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎನ್ನುದು ಧೋರಣೆ.
ಕೊಡಚಾದ್ರಿ ತಪ್ಪಲಿಗೆ ರೋಪವೇ ನಿರ್ಮಾಣ ಮಾಡುವುದರಿಂದ ಪ್ರವಾಸಿಗರ ದಂಡು ಹರಿದು ಬರುತ್ತದೆ ಅದರಿಂದ ಸರ್ಕಾರಕ್ಕೆ ಬರುವಂತಹ ಆದಾಯದಲ್ಲಿ ದುಪ್ಪಟ್ಟು ಹೆಚ್ಚಾಗುತ್ತದೆ. ಸರ್ಕಾರ ಈ ರೀತಿಯಾದಂತಹ ಅಭಿವೃದ್ಧಿಶೀಲ ಕೆಲಸಗಳು ನಿರ್ವಹಿಸಿದರೆ ಸಾರ್ವಜನಿಕರಿಗೆ ಇನ್ನಷ್ಟು ಸಹಕಾರಿಯಾಗಬಹುದು.
ಕೊಡಚಾದ್ರಿ ತಪ್ಪಲಿಗೆ ರೋಪ್ ವೇ ನಿರ್ಮಾಣ ಮಾಡುವ ಸಲುವಾಗಿ ಅನೇಕ ಸಭೆ ನಡೆಗಳು ನಡೆದವು. ಇದರ ಸಾಧಕ ಬಾದಕಗಳು ಸರ್ಕಾರ ಆಲೋಚಿಸಿ ಪ್ರವಾಸೋದ್ಯಮವನ್ನ ಅಭಿವೃದ್ಧಿ ಮಾಡುವಂತಹ ನಿಟ್ಟಿನಲ್ಲಿ ರೋಪ್ ವೇ ನಿರ್ಮಾಣ ಮಾಡುವ ಕಾಮಗಾರಿ ಕೂಡ ಪ್ರಾರಂಭವಾಗುವ ನಿಟ್ಟಿನಲ್ಲಿ ಸಭೆಗಳು ನಡೆದವು. ಸರ್ಕಾರದ ಯೋಜನೆಗಳು ಜನರಿಗೆ ಬಹಳಷ್ಟು ಸಹಕಾರಿ ಆಗುತ್ತದೆ ಎನ್ನುವುದು ಕೆಲವರ ವಾದ ಆದರೆ ಇನ್ನು ಕೆಲವು ಸಾರ್ವಜನಿಕರು ಪ್ರತಿರೋಧ ವ್ಯಕ್ತಪಡಿಸುತ್ತಿರುವುದು ಗಮನಕ್ಕೆ ಬಂದಿದೆ ಪಬ್ಲಿಕ್ ಫೈಲ್ ಪತ್ರಿಕೆಯ ಕಾರ್ಯಾಚರಣೆಯ ಮೂಲಕ ರೋಪ್ ವೇ ಕಾಮಗಾರಿ ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವುದು ಕೂಲಂಕುಶವಾಗಿ ಪರಿಶೀಲನೆ ಮಾಡಲಾಗಿದೆ. ಪ್ರವಾಸೋದ್ಯಮವನ್ನ ಅಭಿವೃದ್ಧಿ ಪಡಿಸುವಂತಹ ನಿಟ್ಟಿನಲ್ಲಿ, ಹೆಚ್ಚು ಜನರು ಕೊಡಚಾದ್ರಿ ತಪ್ಪಲಿಗೆ ಆಗಮಿಸುವಿದರಿಂದ ಸರ್ಕಾರದ ಬೊಕ್ಕಸ ಇನ್ನಷ್ಟು ವೃದ್ಧಿಯಾಗುತ್ತದೆ ಎನ್ನುವುದು ಅಲ್ಲಿನ ಜನರ ತೀರ್ಮಾನ ಆದರೆ ಕೆಲವು ಸಾರ್ವಜನಿಕರು ಈ ಕಾಮಗಾರಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಪರಿಸರವನ್ನು ನಾಶ ಮಾಡಿ ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡುವುದು ಬೇಡ ಪರಿಸರಕ್ಕೆ ಮಾರಕವಾಗಿರುವಂತಹ ಇಂತಹ ಯೋಜನೆಗಳು ಪರಿಸರಕ್ಕಿನ್ನಷ್ಟು ಧಕ್ಕೆಯಾಗುತ್ತದೆ. ರೋಪ್ ವೇ ಸಾರ್ವಜನಿಕರಿಗೆ ಅನುಕೂಲವಾದಷ್ಟು ರಸ್ತೆ ಮಾರ್ಗವಾಗಿ ಚಲಿಸುವುದು ಸುಲಭದ ಮಾತು ಎನ್ನುವುದು ಅಲ್ಲಿನ ಜನರ ತೀರ್ಮಾನ. ಹಾಗಾದರೆ ಸರ್ಕಾರ ಇದರ ಬಗ್ಗೆ ಮುತುವರ್ಜಿಯನ್ನು ವಹಿಸಿ ಮುಂದಿನ ಕಾಮಗಾರಿಗಳನ್ನು ಪ್ರಾರಂಭಿಸುವ ಮೊದಲು ಸಾರ್ವಜನಿಕ ಸಭೆಯನ್ನು ಕರೆದು ತೀರ್ಮಾನ ಮಾಡುವುದು ಒಳಿತು. ಶಾಸಕರ ತೀರ್ಮಾನವನ್ನು ಸಾರ್ವಜನಿಕರು ಒಪ್ಪಿಕೊಂಡರೆ ಕಾಮಗಾರಿಯು ಸಲೀಸಾಗಿ ನಡೆಯುತ್ತದೆ. ಇಲ್ಲವಾದರೆ ಸಾರ್ವಜನಿಕರ ವಿರೋಧಕ್ಕೆ ನಡೆಯುವ ಇಂತಹ ಕಾಮಗಾರಿ ಕಾರ್ಯ ರೂಪಕ್ಕೆ ಬಂದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಅಲ್ಲಿನ ಸಾರ್ವಜನಿಕರ ಒಡಂಬಡಿಕೆ.
ಕೇಂದ್ರ ಸರ್ಕಾರ ಕೊಲ್ಲೂರು-ಕೊಡಚಾದ್ರಿ ನಡುವಿನ ರೋಪ್-ವೇ ಯೋಜನೆಗೆ ಒಪ್ಪಿಗೆ ನೀಡಿದೆ. 2022-23 ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ "ಪರ್ವತಮಾಲಾ ಯೋಜನೆ"ಯಡಿ ಕೊಡಚಾದ್ರಿಗೆ ರೋಪ್-ವೇ ನಿರ್ಮಾಣ ಮಾಡಲಾಗುತ್ತದೆ. ಯೋಜನೆಯ ಪ್ರಾಥಮಿಕ ಕಾರ್ಯಗಳು ಈಗ ಆರಂಭವಾಗಿವೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ತಂಡವು ಡಿಪಿಆರ್ ಮತ್ತು ನಕ್ಷೆಯನ್ನು ಅಂತಿಮಗೊಳಿಸಲು ಹಾಗೂ ಡಿಪಿಆರ್ ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ಎರಡು ದಿನದ ಸಮೀಕ್ಷೆ ಮತ್ತು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಲವು ವರ್ಷಗಳಿಂದ ಕೊಲ್ಲೂರು-ಕೊಡಚಾದ್ರಿ ನಡುವಿನ ರೋಪ್-ವೇ ಯೋಜನೆ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಈ ವರ್ಷದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ದೇಶದ 18 ಕಡೆಗಳಲ್ಲಿ ರೋಪ್-ವೇ ನಿರ್ಮಾಣ ಮಾಡುವ ಯೋಜನೆಗೆ ಒಪ್ಪಿಗೆ ನೀಡಿತ್ತು. ಅದರಲ್ಲಿ ಕೊಲ್ಲೂರು-ಕೊಡಚಾದ್ರಿ ಸಹ ಸೇರಿತ್ತು. ಕೊಡಚಾದ್ರಿ-ಕೊಲ್ಲೂರು ಕೇಬಲ್ ಕಾರ್ ನಿರ್ಮಾಣಕ್ಕೆ ಇರುವ ಸಮಸ್ಯೆಯ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಕೇಂದ್ರದ ಪರ್ವತ ಮಾಲಾ ಅಡಿಯಲ್ಲಿ ಬರುವ ನೂತನ ಕೇಬಲ್ ಕಾರ್ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
ಯೋಜನೆಗೆ ಇರುವ ತೊಡಕುಗಳನ್ನು ಪ್ರವಾಸೋದ್ಯಮ, ಅರಣ್ಯ, ರಾಷ್ಟೀಯ ಹೆದ್ದಾರಿ ಅಧಿಕಾರಿಗಳ ಜೊತೆಗೆ ಸೇರಿ ಪರಿಹರಿಸಿ, ಕನಿಷ್ಠ ಒಂದು ತಿಂಗಳ ಅವಧಿಯಲ್ಲಿ ಡಿಪಿಆರ್ ಮಂಜೂರಾತಿ ಪಡೆಯುವುದಾಗಿ ಅಧಿಕಾರಿಗಳ ತಂಡ ಹೇಳಿದೆ.
ಕೊಡಚಾದ್ರಿ-ಕೊಲ್ಲೂರು ರೋಪ್-ವೇ ಯೋಜನೆ ಕುರಿತು ಸ್ಥಳ ಪರಿಶೀಲನೆ ನಡೆಸಲು NHLML ದೆಹಲಿಯ ಹಿರಿಯ ಮ್ಯಾನೇಜರ್ ಅನುರಾಗ್ ತ್ರಿಪಾಟಿ, NHLML ಬೆಂಗಳೂರು ಮ್ಯಾನೇಜರ್ ರೀನಾ ಪವಾರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಶಿವಮೊಗ್ಗದ ಪೀರ್ ಪಾಷಾ, ಡಿಪಿಆರ್ ಕನ್ಸಲ್ಟೆಂಟ್ ಶ್ರವಣ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಗುರುಪ್ರಸಾದ್, ವೆಂಕಟೇಶ್ ಕಿಣಿ ಮುಂತಾದವರ ತಂಡ ಸ್ಥಳ ಪರಿಶೀಲನೆ ನಡೆಸಿತು.
ಯೋಜನೆಯ ವಿಸ್ತ್ರತ ಯೋಜನಾ ವರದಿ ತಯಾರು ಮಾಡಲು ಬೇಕಾದ ಅಂಶಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಂದ ಪಡೆಯಿತು. ಈ ಮೂಲಕ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದ ಯೋಜನೆಯ ಅನುಷ್ಠಾನದ ಪ್ರಾಥಮಿಕ ಕಾರ್ಯಗಳು ಆರಂಭವಾಗಿವೆ.
ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಪ್ರತಿದಿನ ನೂರಾರು ಭಕ್ತರು ಭೇಟಿ ಕೊಡುತ್ತಾರೆ. ಇವರಲ್ಲಿ ಕೊಡಚಾದ್ರಿಯ ಸರ್ವಜ್ಞ ಪೀಠಕ್ಕೆ ಹಲವಾರು ಭಕ್ತರು ಆಗಮಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೊಲ್ಲೂರು- ಕೊಡಚಾದ್ರಿ ರೋಪ್-ವೇ ಯೋಜನೆ ರೂಪಿಸಲಾಗುತ್ತಿದೆ. ರೋಪ್-ವೇ ಯೋಜನೆ ಜಾರಿಯಾದರೆ ಪ್ರವಾಸಿಗರನ್ನು ಸೆಳೆಯಲು ಸಹ ಅನುಕೂಲವಾಗಲಿದೆ.
ಕೊಡಚಾದ್ರಿ ಮತ್ತು ಕೊಲ್ಲೂರು ನಡುವಿನ 40 ಕಿ. ಮೀ. ಸಂಚಾರ ನಡೆಸಲು ಯಾವುದೇ ಸರಿಯಾದ ರಸ್ತೆಗಳಿಲ್ಲ.. ಸುಮಾರು ಒಂದೂವರೆ ಗಂಟೆ ಪ್ರಯಾಣ ಮಾಡಬೇಕಿದೆ. ಆದರೆ ಪ್ರಸ್ತುತ ಜಾರಿಯಾಗಲಿರುವ ರೋಪ್-ವೇ ನಿರ್ಮಾಣವಾದರೆ ಕೊಡಚಾದ್ರಿ-ಕೊಲ್ಲೂರು ನಡುವಿನ ಪ್ರಯಾಣದ ಅವಧಿ 7 ಕಿ. ಮೀ.ಗೆ ಇಳಿಕೆಯಾಗಲಿದ್ದು, 15 ನಿಮಿಷದಲ್ಲಿ ಸಾಗಬಹುದಾಗಿದೆ. 2023 ರಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಯೋಜನೆ ಅನುಷ್ಠಾನಕ್ಕೆ ಬಂದರೆ ಕೊಲ್ಲೂರಿನ ಬಾಡಿಗೆ ಜೀಪು ಚಾಲಕರಿಗೆ ಉದ್ಯೋಗ ಇಲ್ಲದಂತಾಗುತ್ತದೆ ಎಂಬ ಆತಂಕ ಬೇಡ. ರೋಪ್ ವೇ ನಿರ್ದಿಷ್ಟ ಭಾಗದಲ್ಲಿ ನಿರ್ಮಾಣವಾಗುವುದರಿಂದ, ನಿಸರ್ಗ ಸೌಂದರ್ಯ ಸವಿಯುವ ಪ್ರವಾಸಿಗರು ಜೀಪ್‌ಗಳನ್ನು ಹೆಚ್ಚು ಬಳಸುತ್ತಾರೆ ಎಂದರು.
ಕೊಲ್ಲೂರು ಪ್ರದೇಶದಿಂದ ಕೊಡಚಾದ್ರಿಗೆ ಸಂಪರ್ಕ ಕಲ್ಪಿಸುವ ರೋಪ್ ವೇ ದೇಶದ ಅತಿ ಉದ್ದದ 'ರೋಪ್ ವೇ' ಎನ್ನುವ ಹೆಗ್ಗಳಿಕೆ ಪಡೆಯಲಿದೆ. ಯೂರೋಪ್ ಮಾದರಿಯಲ್ಲಿ ಈ ರೋಪ್‌ವೇ ಕಾಮಗಾರಿ ನಡೆಸುವ ಉದ್ದೇಶವಿದ್ದು, ಇಪಿಐಎಲ್ ಕಂಪೆನಿ ಸರ್ವೇ ಕಾರ್ಯ ನಡೆಸುತ್ತಿದೆ ಎಂದರು.
ರೋಪ್ ವೇ.. ಗೆ ಸಂಬಂಧಪಟ್ಟಂತೆ ಅಂದಿನ ಕಾರ್ಯಕ್ರಮದಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಯಡ್ತರೆ ಶಂಕರ್ ಪೂಜಾರಿ, ಬಿಜೆಪಿ ಪ್ರಮುಖರಾದ ಡಾ.ಅತುಲ್ ಕುಮಾರ್ ಶೆಟ್ಟಿ, ಪ್ರಕಾಶ್ ಪೂಜಾರಿ ಜಡ್ಡು, ಸಂತೋಷ್ ಭಟ್, ಚಂದ್ರಯ್ಯ ಆಚಾರ್, ಕಳಿ, ಉದ್ಯಮಿ ವೆಂಕಟೇಶ ಕಿಣಿ, ಬೈಂದೂರು ಇದ್ದರು. ಅಂದಿನ ಸಭೆಯಲ್ಲಿ ನಡೆದ ಮಾತುಕತೆ ಪ್ರಕಾರ ಮುಂದೊಂದು ದಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೊಡಚಾದ್ರಿ ದಾಪುಗಾಲು ಇಡಲಿದೆ ಎನ್ನುವುದು ಜನರ ತೀರ್ಮಾನ.. ಒಟ್ಟಾರೆಯಾಗಿ ಕಾಮಗಾರಿ ಯಾವ ಹಂತದಲ್ಲಿ ನಡೆಯುತ್ತದೆ ಮತ್ತು ಅಲ್ಲಿನ ಸಾಧಕ ಬಾದಕಗಳನ್ನು ಸಾರ್ವಜನಿಕರು ಮತ್ತು ಶಾಸಕರು ಗಮನಹರಿಸಿ, ಪ್ರತಿಕೂಲ ಪರಿಸ್ಥಿತಿಯನ್ನು ಅವಲೋಕಿಸಿ ಸಾರ್ವಜನಿಕರು ಇನ್ನಷ್ಟು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಕೈಗೊಳ್ಳುವುದು ಒಳಿತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.








