ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಶ್ಲಾಘನೀಯ ಸೇವಾ ಪದಕ.

26 Jan 2025
ಸ್ಥಳೀಯ ಸುದ್ದಿ

ಬೆಂಗಳೂರು,ಜ.25- ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಗಳು ಮತ್ತು ಶ್ಲಾಘನೀಯ ಸೇವಾ ಪದಕಗಳು ಲಭಿಸಿವೆ.


ಕೆಎಸ್‌ಆರ್ಪಿ-ಡಿಐಜಿಪಿ ಬಸವರಾಜು ಶರಣಪ್ಪ ಜಿಳ್ಳೆ ಹಾಗೂ ಕೆಎಸ್‌ಆರ್ಪಿ 12ನೇ ಪಡೆಯ ಕಮಾಂಡೆಂಟ್ಹಂಜಾ ಹುಸೇನ್ ಅವರು ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಡಿಸಿಆರ್‌ಇ-ಡಿಐಜಿಪಿ ರೇಣುಕಾ ಕೆ. ಸುಕುಮಾರ ಹಾಗೂ ಚೀಫ್ ಆಫೀಸ್ನ ಎಐಜಿಪಿ ಜನರಲ್ ಡಾ.ಸಂಜೀವ್ ಎಂ.ಪಾಟೀಲ್ ಅವರಿಗೆ ಶ್ಲಾಘನೀಯ ಸೇವಾಪದಕ ಲಭಿಸಿದೆ.


ಕೊಪ್ಪಳ ಜಿಲ್ಲೆಯ ಮುನಿರಾಬಾದ್, ಐಆರ್ಬಿ-ಕಮಾಂಡೆಂಟ್ ಜಿ.ಎಂ.ಪ್ರಸಾದ್, ಹಾಸನದ 11ನೇ ಪಡೆಯ ಡೆಪ್ಯೂಟಿ ಕಮಾಂಡೆಂಟ್ ವೀರೇಂದ್ರ ನಾಯಕ್, ಸಿಸಿಬಿ ಎಸಿಪಿ ಗೋಪಾಲ ಡಿ ಜೋಗಿನ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ ಬಿ ಗೌಡರ್, ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಗುರುಬಸವರಾಜ, ಬೆಂಗಳೂರಿನ ಗೋವಿಂದಪುರ ಠಾಣೆ ಇನ್‌ಸ್ಪೆಕ್ಟರ್‌ ಜಯರಾಜ್, ಹಾಸನ ಜಿಲ್ಲಾ ಹೊಳೆನರಸೀಪುರ ಸರ್ಕಲ್ ಇನ್‌ಸ್ಪೆಕ್ಟರ್‌ ಪ್ರದೀಪ್, ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್‌ ಮೊಹಮದ್ ಮುಕರಮ್, ಬ್ಯುರೋ ಆಫ್ ಇಮಿಗೇರೇಷನ್ ಇನ್ಸ್ ಪೆಕ್ಟರ್ ವಸಂತಕುಮಾರ್, ಸಿಐಡಿ ಎಎಸ್‌ಐ ಮಂಜುನಾಥ, ವಿಲ್ಸನ್ಗಾರ್ಡನ್ ಠಾಣೆ ಎಎಸ್‌ಐ ಅಲ್ತಾಫ್ ಹುಸೇನ್ ಎನ್ ದಖನಿ, ಕೆಎಸ್‌ಆರ್ಪಿ 4ನೇ ಪಡೆಯ ಹೆಡ್ ಕಾನ್ಸ್ಟೇಬಲ್ ಬಲೇಂದ್ರನ್, ಕಲಬುರಗಿ ಈಶಾನ್ಯ ವಲಯದ ಡಿಐಜಿಪಿ ಕಚೇರಿಯ ಹೆಡ್ ಕಾನ್ಸ್ಟೇಬಲ್ ಅರುಣಕುಮಾರ, ಚಿಕ್ಕಮಗಳೂರು ಜಿಲ್ಲೆ ಡಿಪಿಒ ಹೆಡ್ ಕಾನ್ಸ್ಟೇಬಲ್ ನಯಾಜ್ ಅಂಜುಮ್,ಕಾನ್ಸ್ಟೇಬಲ್ ಶ್ರೀನಿವಾಸ, ರಾಜ್ಯ ಗುಪ್ತವಾರ್ತೆಯ ಹಿರಿಯ ಗುಪ್ತ ಸಹಾಯಕರಾದ ಅಶ್ರಫ್ ಹಾಗೂ ಉಡುಪಿ ಜಿಲ್ಲೆ ಕುಂದಾಪುರ ಠಾಣೆಯ ಹೆಡ್ ಕಾನ್ಸ್ಟೇಬಲ್ ಶಿವಾನಂದ ಅವರಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.

Recently Updated:

ಉಡುಪಿ ತಾಲೂಕು ಕಛೇರಿ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ.! ಉಡುಪಿ ತಾಲೂಕು ಕಚೇರಿಯಂತಹ ಪ್ರಮುಖ ಸಾರ್ವಜನಿಕ ಸ್ಥಳದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವುದಲ್ಲದೆ, ದುರ್ವಾಸನೆ ಮತ್ತು ರೋಗ ಹರಡುವ ಭೀತಿಯನ್ನು ಹಉಡುಪಿ ತಾಲೂಕು ಕಛೇರಿ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ.! ಉಡುಪಿ ತಾಲೂಕು ಕಚೇರಿಯಂತಹ ಪ್ರಮುಖ ಸಾರ್ವಜನಿಕ ಸ್ಥಳದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವುದಲ್ಲದೆ, ದುರ್ವಾಸನೆ ಮತ್ತು ರೋಗ ಹರಡುವ ಭೀತಿಯನ್ನು ಹ
ಕಲಿಕೆ ಜೊತೆಗೆ ಕೌಶಲವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆ ಮೊಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಕಲಿಕೆ ಜೊತೆಗೆ ಕೌಶಲವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆ ಮೊಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಕಲ್ಲಡ್ಕ ಕೆ ಸಿ ರೋಡಿನಲ್ಲಿ ಹಗಲಿನಲ್ಲೇ ಉರಿಯುತ್ತಿರುವ ಬೀದಿ ದೀಪ.ಕಲ್ಲಡ್ಕ ಕೆ ಸಿ ರೋಡಿನಲ್ಲಿ ಹಗಲಿನಲ್ಲೇ ಉರಿಯುತ್ತಿರುವ ಬೀದಿ ದೀಪ.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮನೆಯ ಹತ್ತಿರದ ಸೋಲಾರ್ ದಾರಿ ದೀಪ ಕಳ್ಳತನ.! ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮನೆಯ ಹತ್ತಿರದ ಸೋಲಾರ್ ದಾರಿ ದೀಪ ಕಳ್ಳತನ.!
ಆದಾಯದ ಹೆಸರಿನಲ್ಲಿ ಪರಿಸರ ನಾಶ ಅದೆಷ್ಟು ಸರಿ.!? ಕಾಡಿಗೆ ಬೀಳದಿರಲಿ ಕೊಡಲಿ..!!ಆದಾಯದ ಹೆಸರಿನಲ್ಲಿ ಪರಿಸರ ನಾಶ ಅದೆಷ್ಟು ಸರಿ.!? ಕಾಡಿಗೆ ಬೀಳದಿರಲಿ ಕೊಡಲಿ..!!
ಕೃಷ್ಣ ನಗರಿ ಉಡುಪಿಯಲ್ಲಿ ಪಬ್ಲಿಕ್ ಫೈಲ್ ಪತ್ರಿಕೆಯ ವಿಭಿನ್ನ ಕಾರ್ಯಕ್ರಮ.. ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರ ಸಮಾಗಮ..ಕೃಷ್ಣ ನಗರಿ ಉಡುಪಿಯಲ್ಲಿ ಪಬ್ಲಿಕ್ ಫೈಲ್ ಪತ್ರಿಕೆಯ ವಿಭಿನ್ನ ಕಾರ್ಯಕ್ರಮ.. ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರ ಸಮಾಗಮ..
ಅಕ್ರಮ ಮದ್ಯ ಮಾರಾಟ ಸಕ್ರಮ.! ಅಬಕಾರಿ,ಪೋಲಿಸು ಪಾಪದ ಪಾಲಿನ ಮಿತ್ರಮ..!?  ಕೂಡ್ಲಿಗಿಯಲ್ಲಿ ಅಕ್ರಮ ಮದ್ಯ ಮಾರಾಟದ ಗೋಳು.!? ಯುವಜನರ ಭವಿಷ್ಯ ಹಾಳು.!?ಅಕ್ರಮ ಮದ್ಯ ಮಾರಾಟ ಸಕ್ರಮ.! ಅಬಕಾರಿ,ಪೋಲಿಸು ಪಾಪದ ಪಾಲಿನ ಮಿತ್ರಮ..!? ಕೂಡ್ಲಿಗಿಯಲ್ಲಿ ಅಕ್ರಮ ಮದ್ಯ ಮಾರಾಟದ ಗೋಳು.!? ಯುವಜನರ ಭವಿಷ್ಯ ಹಾಳು.!?
ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗಿಲ್ಲ ಮೂಲ ಸೌಕರ್ಯ.!? ಶೀಘ್ರ ಸೌಲಭ್ಯ ಒದಗಿಸದಿದ್ದರೆ ಹೋರಾಟ-ರೈತ ಮುಖಂಡರ ಎಚ್ಚರಿಕೆ..!!ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗಿಲ್ಲ ಮೂಲ ಸೌಕರ್ಯ.!? ಶೀಘ್ರ ಸೌಲಭ್ಯ ಒದಗಿಸದಿದ್ದರೆ ಹೋರಾಟ-ರೈತ ಮುಖಂಡರ ಎಚ್ಚರಿಕೆ..!!
ಬ್ರಹ್ಮಾವರ: ಕಾಡು ಪ್ರಾಣಿಗಳ ಬೇಟೆಗೆ ಯತ್ನ: ಭಟ್ಕಳ ಮೂಲದ ಮೂವರ ಬಂಧನ. ಬ್ರಹ್ಮಾವರ: ಕಾಡು ಪ್ರಾಣಿಗಳ ಬೇಟೆಗೆ ಯತ್ನ: ಭಟ್ಕಳ ಮೂಲದ ಮೂವರ ಬಂಧನ.