ವಿಜಯಪುರ ಜಿಲ್ಲೆಯ ಬಬಲೆಶ್ವರ ಪಟ್ಟಣದಲ್ಲಿ ಶ್ರೀ ಜ್ಞಾನಗಂಗೋತ್ರಿ ಶಾಲೆ
ಅದರಲ್ಲಿಯೂ ಈಗಿನ ಕಾಲದ ಮಕ್ಕಳು ನೋಡಿ ಕಲಿತುಕೊಳ್ಳುವುದರಲ್ಲಿ ವಿಶೇಷತೆಯನ್ನು ಹೊಂದಿದ್ದಾರೆ
ಇದಕ್ಕೆ ಸಾಕ್ಷಿ ಎಂಬಂತೆ
ವಿಜಯಪುರ ಜಿಲ್ಲೆಯ ಬಬಲೆಶ್ವರ ಪಟ್ಟಣದಲ್ಲಿ ಶ್ರೀ ಜ್ಞಾನಗಂಗೋತ್ರಿ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಬಬ್ಲೆಶ್ವರ್ ದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಕ್ಕಳ ವ್ಯಾಪಾರ ಕೌಶಲ್ಯ ಅಲ್ಲಿ ನೆರೆದವರನ್ನು ಬೆರಗುಗೊಳಿಸಿತು
ಮಕ್ಕಳಲ್ಲಿ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವುದರ ಜೊತೆಗೆ ಗಣಿತ ಮೂಲ ಕಲ್ಪನೆಗಳನ್ನು ಮೂಡಿಸುವ ಉದ್ದೇಶದಿಂದ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು
ಸಂತೆಯಲ್ಲಿ ಮಕ್ಕಳು ತಾವು ಮನೆಯಲ್ಲಿ ಬೆಳೆದು ತಂದಿದ್ದ ತಾಜಾ ತರಕಾರಿಗಳನ್ನು ಅತ್ಯಂತ ಉತ್ಸಾಹದಿಂದ ಮಾರಾಟ ಮಾಡುವುದರಲ್ಲಿ ನಿರತರಾಗಿದ್ದು ಕಂಡುಬಂದಿತು ಪೋಷಕರು ಸಾರ್ವಜನಿಕರು ಮಕ್ಕಳು ಸಂತೆಗೆ ಆಗಮಿಸಿ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಹುರಿದುಂಬಿಸಿದರು.
ತರಕಾರಿ ಸೊಪ್ಪು ಹಣ್ಣುಗಳು ದಿನಸಿ ವಸ್ತು ಸ್ವಚ್ಛ ಹಾಗೂ ಪರಿಶುದ್ಧ ತಿಂಡಿ ತಿನಿಸುಗಳು ಸೇರಿದಂತೆ ಹಲವು ಬಗೆಯುವ ವಸ್ತುಗಳನ್ನು ತಂದು ಅವುಗಳ ಪ್ರಚಾರ ಮಾಡುತ್ತಾ ಬಿರುಸಿನ ವ್ಯಾಪಾರದ ಅನುಭವ ಪಡೆದರು.
ವಿದ್ಯಾರ್ಥಿಗಳು ಸಂತೆ ಮೇಳದಲ್ಲಿ ವಿಶೇಷವಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಗಮನಾರವಾಗಿತ್ತು ಇದನ್ನು ಗಮನಿಸಿದ ಪೋಷಕರು ಗ್ರಾಮಸ್ಥರು ಸಂತೆ ಮೇಳದಲ್ಲಿ ಖರೀದಿಗೆ ಬಂದು ಸಾರ್ವಜನಿಕರು ಮಕ್ಕಳ ಉತ್ತಪ್ಪ ಬೆಳವಣಿಗೆಗೆ ನೋಡಿ ಪ್ರಶಾಂಶೆ ಪಡಿಸಿದರು ಅಲ್ಲದೆ ಅನೇಕ ಪೋಷಕರು ಈ ಚಟುವಟಿಕೆಗೆ ಪೂರಕವಾಗಿ ಸಹಕರಿಸಿದ್ದು ಕಂಡುಬಂದಿತು.
ಈ ಒಂದು ಸಂದರ್ಭದಲ್ಲಿ ಈ ಶಾಲೆಯ ಅಧ್ಯಕ್ಷರಾದಂತಹ ಶ್ರೀ ಸಂತೋಷ್ ರಾಂಪುರ್
ಕಾರ್ಯದರ್ಶಿಗಳು ಆದಂತ ಸುರೇಶ್ ಎಸ್ ಗೌಡಪ್ಪಗೋಳ
ಶಾಲೆಯ ಮುಖ್ಯ ಗುರು ಮಾತೆಯರುಆದಂತ
ಶ್ರೀಮತಿ ಭಾಗ್ಯಜ್ಯೋತಿ ಪವಾಡಿ
ಜ್ಞಾನ ಗಂಗೋತ್ರಿ ಶಿಕ್ಷಕ ವೃಂದ ಹಾಗೂ ಗುರುಮಾತೆಯರು ಹಾಗೂ ಸಂಸ್ಥೆಯ ಎಲ್ಲ ಸದಸ್ಯರು ಈ ಸಂತೆ ಕಾರ್ಯಕ್ರಮದಲ್ಲಿ ಹಾಜರಿದ್ದರು








