ವಿದ್ಯುತ್ ಕೊರತೆಯ ಮಧ್ಯೆಯು ಬಂಟ್ವಾಳ ತಾಲೂಕಿನ ಕಲ್ಲಡ್ಕದ ಕೆ ಸಿ ರೋಡಲ್ಲಿ ಹಗಲಲ್ಲಿ ಬೀದಿ ದೀಪ ಉರಿಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ನಿತ್ಯ 12 ರಿಂದ 14 ಗಂಟೆಗಳಷ್ಟು ವಿದ್ಯುತ್ ನಷ್ಟವಾಗುತ್ತಿದ್ದು, ವಿದ್ಯುತ್ ಕಳವಿಗಿಂತ ಇಲಾಖೆಯ ನಿರ್ಲಕ್ಷ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತಿದೆ.
ಬೆಸ್ಕಾಂ ಇಲಾಖೆ ಜಾಣ ಕುರುಡತನವು ಅಥವಾ ಇರುಳು ಕುರುಡರು ಎನ್ನುವುದಕ್ಕೆ ಇದು ಒಂದು ಸಾಕ್ಷಿ..
ಹಲವಾರು ದಿನಗಳಿಂದ ಬಂಟ್ವಾಳ ತಾಲೂಕು ಕಲ್ಲಡ್ಕ ಕೆಸಿ ರೋಡಿನಲ್ಲಿ ಹಗಲಿರಲು ಬೀದಿ ದೀಪ ಉರಿಯುತ್ತಿದ್ದರು ಯಾವೊಬ್ಬ ಬೆಸ್ಕಾಂ ಅಧಿಕಾರಿಗಳು ಅಥವಾ ಬೆಸ್ಕಾಮ್ಮಿಗೆ ಸಂಬಂಧಪಟ್ಟ ಸಿಬ್ಬಂದಿ ವರ್ಗದವರು ಮತ್ತು ಗ್ರಾಮ ಪಂಚಾಯತ್ ವಾರ್ಡಿಗೆ ಸಂಬಂಧಪಟ್ಟ ಸದಸ್ಯನ ಗಮನಕ್ಕೆ ಬಾರದೆ ಇರುವುದು ಆಶ್ಚರ್ಯಕರ ವಿಷಯ ಇದು.








