ತಾಲೂಕ್ ಪಂಚಾಯಿತಿ ಇಓ ಹಾಗೂ ಗ್ಯಾರಂಟಿ ಯೋಜನೆ ಅಧ್ಯಕ್ಷರು ಮತ್ತು ಸದಸ್ಯರುಗಳು ಗ್ರಾಮ ಪಂಚಾಯಿತಿ ಮತ್ತು ಗ್ಯಾರಂಟಿ ಯೋಜನೆ ಸಂಬಂಧಪಟ್ಟ ಇಲಾಖೆಗಳ ಮತ್ತು ಫಲಾನುಭವಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಈ ಯೋಜನೆಯಲ್ಲಿ ಯಾವ ಇಲಾಖೆಯಲ್ಲಿ ಸೌಲತ್ತುಗಳು ಸಿಗುತ್ತಿದೆ ಮತ್ತು ಯಾರಿಗೆ ಸಿಗುತ್ತಿಲ್ಲ ಅದರ ಬಗ್ಗೆ ಮಾಹಿತಿಯನ್ನು ಎಲ್ಲಾ ಇಲಾಖೆ ವತಿಯಿಂದ ಗ್ಯಾರಂಟಿ ಯೋಜನೆ ಸಮಿತಿಯಲ್ಲಿ ಮಾಹಿತಿ ಪಡೆದುಕೊಳ್ಳಲಾಯಿತು.
ಗ್ಯಾರೆಂಟಿ ಯೋಜನೆಗೆ ಸಂಬಂಧಪಟ್ಟ ಗ್ಯಾರಂಟಿ ಯೋಜನೆ ಒಳಪಟ್ಟಿರುವ ಇಲಾಖೆಗಳ ಅಧಿಕಾರಿಗಳು ಅದರ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ಗ್ಯಾರಂಟಿ ಯೋಜನೆ
ಅಧ್ಯಕ್ಷರು ಪ್ರಕಾಶ್ ಗೌಡರು ಪ್ರತಿ ಒಂದು ಹೋಬಳಿಯಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನದ ಫಲಾನುಭವಿಗಳ ಮಾಹಿತಿ ಮತ್ತು ಅಲ್ಲೇ ಅಧಿಕಾರಿಗಳನ್ನು ಕರೆಸಿ , ಪ್ರತಿ ಹೋಬಳಿಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು
ಮುಂದಿನ ಒಂದು ಗ್ಯಾರಂಟಿ ಯೋಜನೆಯ ಸಮಿತಿಯಲ್ಲಿ ತೀರ್ಮಾನಿಸಿ ಇದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಹಾಸನ ವರದಿ.
ಶಂಕರೇ ಗೌಡ ಹುಲಿಕೆರೆ.








