ಆರ್ ಟಿ ಐ ಕಾರ್ಯಕರ್ತರ ಮೇಲೆ ಗದಾ ಪ್ರಹಾರ.!? "ಬ್ಲಾಕ್ ಲಿಸ್ಟ್" ಸೇರಿಸುವ ಹುನ್ನಾರ

01 Feb 2025
ರಾಜ್ಯ


ಇತ್ತೀಚೆಗೆ ಸರಕಾರದ ಒಂದು ಘನ ನಿರ್ದಾರ ಕೈಗೊಂಡು ನಿರ್ದಾಕ್ಷಿಣ್ಯವಾಗಿ ಮಾಹಿತಿ ಹಕ್ಕು ಕಾಯಿದೆ (ಆರ್ ಟಿ ಐ) ಕಾರ್ಯಕರ್ತರನ್ನು ಸದೆ ಬಡೆಯುವ ನಿರ್ಧಾರದಿಂದ ಆರ್ ಟಿ ಐ ಕಾರ್ಯಕರ್ತರನ್ನು, ಮಾಹಿತಿ ಹಕ್ಕು ಹೋರಾಟಗಾರರನ್ನು ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಸದೆಬಡೆಯಲು ಸಿದ್ದವಾಗಿದ್ದು.. ವಿಶೇಷ ಅಭಿಯಾನ ಕೈಗೊಂಡಿರುವ ಮಾಹಿತಿ ಹಕ್ಕು ಆಯೋಗ ಈಗಾಗಲೇ ಹನ್ನೆರಡು ಜನ ಮಾಹಿತಿ ಹಕ್ಕು ಕಾರ್ಯಕರ್ತರುಗಳನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲಾಗಿದೆ..

ಎಲ್ಲಾ ಮಾಹಿತಿ ಹಕ್ಕು ಬಳಕೆದಾರರು ಹಾಗೂ ಸಾಮಾಜಿಕ ಹೋರಾಟಗಾರರು..ಕಾರ್ಯಕರ್ತರು ಬೃಹತ್ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ..

ಸದ್ಯಕ್ಕೆ ಹಲವು ಪ್ರಭಾವಶಾಲಿ ವ್ಯಕ್ತಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಆರ್ ಟಿ ಐ ಕಾರ್ಯಕರ್ತರನ್ನು ಹಲ್ಲು ಕಿತ್ತ ಹಾವಿನಂತೆ ಮಾಡಲು ಸರ್ವ ರೀತಿಯ ಸಿದ್ದತೆ ನಡೆಸುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯನ್ನು ಮತ್ತು ಬಳಕೆದಾರರನ್ನು ದುರ್ಬಲವಾಗುವಂತೆ ಮಾಡಿ ಇಂದು ಆ ಏಳು ಮಂದಿ ಕಪ್ಪು ಪಟ್ಟಿಗೆ.. ನಾಳೆ, ನಾವು ಅಥವಾ ನೀವು..ಇದನ್ನು ನೋಡಿಕೊಂಡು ಸುಮ್ಮನೆ ಇರಲು ಸಾದ್ಯವಿಲ್ಲ ಇವರಿಗೆ ತಕ್ಕ ಪಾಠ ಕಲಿಸಬೇಕು..ಎಂದು ತೀರ್ಮಾನಿಸಿರುವ ಎಲ್ಲಾ ಆರ್ ಟಿ ಐ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಒಗ್ಗೂಡ ಬೇಕು. ಇಲ್ಲದಿದ್ದರೆ ರಾಜ್ಯದ ಅರ್ಧದಷ್ಟು ಜನ ಕಪ್ಪು ಪಟ್ಟಿಗೆ ಸೇರುವುದು ಖಚಿತ.. ಎಂದು ಬರುವ ತಿಂಗಳ 6 ನೇ ತಾ. ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ‌ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.


ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ..


ಮಾಹಿತಿ ಹಕ್ಕು ಕಾಯಿದೆಯ ಬಳಕೆದಾರರನ್ನು ಕಟ್ಟಿ ಹಾಕುವ ಇಂತಹ ಪ್ರಯತ್ನಕ್ಕೆ "ದಿಕ್ಕಾರ." "ದಿಕ್ಕಾರ.."

ಸಾಂವಿಧಾನಿಕವಾದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ ಕರ್ನಾಟಕ ಮಾಹಿತಿ ಆಯೋಗ...!

ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವನ್ನು ತಿಳಿಯದ ಮಾಹಿತಿ ಆಯುಕ್ತರು..!

ಮಾಹಿತಿ ಆಯುಕ್ತರ ಈ ನಡೆ ಒಂದು ಸಾಂಕ್ರಾಮಿಕ ರೋಗವಿದ್ದಂತೆ..

ಇಂದು ಲಸಿಕೆ ಹಾಕದಿದ್ದರೆ, ಎಲ್ಲೆಡೆ ಇದು ಹರಡುತ್ತದೆ..!

ಮಾಹಿತಿ ಹಕ್ಕು ಕಾಯ್ದೆಯನ್ನು ಭ್ರಷ್ಟರ ಜೊತೆಗೆ ಶಾಮೀಲಾಗಿ ನಾಶ ಮಾಡುವ ಪ್ರಯತ್ನಕ್ಕೆ ದಿಕ್ಕಾರ...!

ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರ ಹೋರಾಟವನ್ನು ಹತ್ತಿಕ್ಕುವ, ಮುಖ್ಯ ಆಯುಕ್ತರ ನಡೆಯನ್ನು ಖಂಡಿಸಿ ಹೋರಾಟ..!

ಮಾಹಿತಿ ಹಕ್ಕು ಕಾಯಿದೆಯ ಬಳಕೆದಾರರನ್ನು ಬ್ಯಾನ್ ಮಾಡಲು ಯಾವ ಕಾನೂನಿನಲ್ಲಿ ಅವಕಾಶವಿದೆ. ಮುಖ್ಯ ಆಯುಕ್ತರೇ..!

ಸಾಮಾಜಿಕ ಹೋರಾಟಗಾರರನ್ನು, ಕಾಯ್ದೆಯ ಬಳಸದಂತೆ ಕಪ್ಪು ಪಟ್ಟಿಗೆ ಸೇರಿಸುವ ಹಕ್ಕನ್ನು ಯಾರು ಕೊಟ್ಟರು,ಉತ್ತರ ಕೊಡಿ ಮಾಹಿತಿ ಆಯೋಗದ, ಮುಖ್ಯ ಆಯುಕ್ತರೇ...!

ಮಾಹಿತಿ ಹಕ್ಕು ಕಾಯಿದೆ ಹೇಗೆ ದುರ್ಬಳಕೆ ಆಗಿದೆ ಎಂಬುದನ್ನು ಸಾಬೀತು ಪಡಿಸಿ. ಮಾಹಿತಿ ಆಯೋಗದ ಮುಖ್ಯ ಆಯುಕ್ತರೇ..!

ಏಳು ಮತ್ತು ಇಪ್ಪತ್ತು ಮಂದಿ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರನ್ನು ಬ್ಲಾಕ್ ಲಿಸ್ಟ್ ಮಾಡಿರುವ , ಕರ್ನಾಟಕ ಮಾಹಿತಿ ಆಯೋಗದ ನಡೆಯನ್ನು ಖಂಡಿಸಿ ಬೃಹತ್ ಹೋರಾಟ.


ಸ್ಥಳ:- ಫ್ರೀಡಂ ಪಾರ್ಕ್, ಗಾಂಧಿನಗರ, ಬೆಂಗಳೂರು.

ದಿನಾಂಕ:06-02-2025 ರಂದು ಬೆಳಿಗ್ಗೆ 9.30 ಕ್ಕೆ ರಾಜ್ಯದ ಎಲ್ಲಾ ಸಾಮಾಜಿಕ ಹೋರಾಟಗಾರರು ಈ ಹೋರಾಟದಲ್ಲಿ ಭಾಗವಹಿಸುವಂತೆ ಮನವಿ.


ಇಂದು 20 ಮಂದಿ.

ನಾಳೆ ನಾವು ಮತ್ತು ನೀವು.. ತಾವು ಬನ್ನಿ ತಮ್ಮವರನ್ನು ಕರೆತನ್ನಿ ಸತ್ಯಮೇವ ಜಯತೆ.


ಪ್ರಕಟಣೆ: ಮಾಹಿತಿ ಹಕ್ಕು ಬಳಕೆದಾರರ ಹಾಗೂ ಸಾಮಾಜಿಕ

ಒಕ್ಕೂಟ.

7795581225


ದಿನಾಂಕ 06-02-2025 ರಂದು ನಡೆಯಲಿರುವ ಹೋರಾಟದಲ್ಲಿ ಭಾಗವಹಿಸುತ್ತಿರುವ ಸಂಘಟನೆಗಳು.


1) ಮಾಹಿತಿ ಹಕ್ಕು ಬಳಕೆದಾರರ ಹಾಗೂ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ.


2) ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ.

ರಾಜ್ಯಾಧ್ಯಕ್ಷರು. ಶ್ರೀ .ಡಾ. ಎಸ್. ಆರ್ ರಾಘವೇಂದ್ರ


3) ಕರ್ನಾಟಕ ಪತ್ರಕರ್ತರು, ಸಂವಿಧಾನ ಹಾಗೂ ಮಾನವ ಹಕ್ಕು ಸಂರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ (ರಿ)

ಶ್ರೀ. ದಾವಲಸಾಬ ಎಂ. ಮಿಯ್ಯಾನವರ.

ರಾಜ್ಯಾಧ್ಯಕ್ಷರು.


4) ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಮಿತಿ.

ಶ್ರೀ. ಶಂಕರ್ ನಾಯಕ್

ರಾಜ್ಯಾಧ್ಯಕ್ಷರು.


5) ರಾಷ್ಟ್ರೀಯ ಭ್ರಷ್ಟಾಚಾರ ನಿಯಂತ್ರಣ ಮಂಡಳಿ (ರಿ)

ಶ್ರೀ. ಚೆಲುವರಾಜು. ಎನ್.

ನಿರ್ದೇಶಕರು


6) ದಲಿತ ಸಂರಕ್ಷ ಸಮಿತಿ (ರಿ)

ಕರ್ನಾಟಕ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರು

ಶ್ರೀ. ಹನುಮಂತ. ಬಿ. ಹರಿಜನ.


ಮಾಹಿತಿ ಹಕ್ಕು ಕಾಯ್ದೆಯನ್ನು ಹತ್ತಿಕ್ಕಲು ‌ಯತ್ನಿಸುತ್ತಿರುವವರ ವಿರುದ್ದ ಬೃಹತ್ ಹೋರಾಟ ನಡೆಸಲು ಇದೀಗ ಸಿದ್ದತೆ ನಡೆಯುತ್ತಿದೆ, ಏಕೆಂದರೆ ಬರುವ ದಿನಗಳಲ್ಲಿ ಈ ಕಚಡಾ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳು, ಪ್ರಭಾವಿ‌ ವ್ಯಕ್ತಿಗಳು ಸೇರಿ ಮಾಹಿತಿ ಹಕ್ಕು ಕಾಯಿದೇನೆ ಇಲ್ಲದಂತೆ ಮಾಡುತ್ತಾರೆ ಎನ್ನುವ ಸಂಶಯ ಬರುತ್ತಿದೆ, ಈ ಹೋರಾಟ ಯಾವ ರೀತಿಯಲ್ಲಿ ಇರಬೇಕು ಅಂದರೆ ಕಪ್ಪು ಪಟ್ಟಿಗೆ ಸೇರಿಸಿದ ಆ ಏಳು ಜನರ ಮೇಲಿನ ಆದೇಶ ಕೂಡಲೇ ಹಿಂಪಡೆಯಬೇಕು ಹಾಗೂ ಈಗಿರುವ ಮಾಹಿತಿ ಆಯೋಗದ ಆಯುಕ್ತ ಡಾ. ಸತ್ಯನ್ ಅವರನ್ನು ಕೂಡಲೇ ಆಯುಕ್ತ ಸ್ಥಾನದಿಂದ ಕೇಳಗಿಳಿಸಬೇಕು ಆ ರೀತಿಯಲ್ಲಿ ಈ ಉಗ್ರ ಹೋರಾಟ ನಡೆಯಬೇಕು ಹಾಗೂ ಈ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಇನ್ನು ಮುಂದೆ ಮಾಹಿತಿ ಹಕ್ಕು ಕಾರ್ಯಕರ್ತರ ವಿಷಯದಲ್ಲಿ ಯಾರು ಮೂಗು ತೂರಿಸಬಾರದೆಂದು ಈ ಹೋರಾಟದ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ಮಾಹಿತಿ ಆಯೋಗದ ಆಯುಕ್ತರಿಗೆ ನಮ್ಮ ಹೋರಾಟದ ಮುಖಾಂತರ ಮನವರಿಕೆ ಮಾಡಿಕೊಡಬೇಕೆನ್ನುವ ಅಭಿಪ್ರಾಯ ನಮ್ಮದು, ಭಾರತಿಯ ಸಂವಿಧಾನದ ಮಾಹಿತಿ ಹಕ್ಕು ಕಾಯ್ದೆಯ ಅಧಿಕಾರವನ್ನು ನಾವೆಲ್ಲರೂ ಕಾಪಾಡಬೇಕಿದೆ.. ಎಂಬುದು ಆರ್ ಟಿ ಐ ಕಾರ್ಯಕರ್ತರುಗಳ ಒಕ್ಕೊರಲ ಒತ್ತಾಯ..


ಬ್ಲಾಕ್ ಲಿಸ್ಟ್ ಗೆ ಸೇರಿದ ಕಾರ್ಯಕರ್ತರೊಬ್ಬರ ಅಭಿಪ್ರಾಯ..


ಮಾಹಿತಿ ಹಕ್ಕಿನಲ್ಲಿ ಸಾವಿರಾರು ಅರ್ಜಿಗಳನ್ನು ಸಲ್ಲಿಸುವುದು ಮಾಹಿತಿ ಹಕ್ಕಿನ ದುರುಪಯೋಗವೇ?

ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭವಾದದ್ದು ೨೦೧೬ ರಲ್ಲಿ.. ಆಗಿನ ಮುಖ್ಯ ಮಾಹಿತಿ ಆಯುಕ್ತರಾಗಿದ್ದ ಶ್ರೀ. ಸುಚೇತನಾ ಸ್ವರೂಪ್‌ ಅವರು ಕೆಲವು ಕಾರ್ಯಕರ್ತರನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶವನ್ನು ಹೊರಡಿಸಿದ್ದರು. ಅವರ ಪಟ್ಟಿಯಲ್ಲಿ ನಾನೂ ಒಬ್ಬ. ಆದರೆ ಅವರ ಆದೇಶವನ್ನು ಮಾಹಿತಿ ಆಯೋಗದ ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿದಾಗ ಶ್ರೀ ಸುಚೇತನಾ ಸ್ವರೂಪ್‌ ಅವರ ಆದೇಶವನ್ನು ವಜಾಗೊಳಿಸಲಾಯಿತು. ಕಪ್ಪುಪಟ್ಟಿಗೆ ಸೇರಿಸಿದ ಯಾವ ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದನ್ನು ನಿಲ್ಲಿಸಿಯೂ ಇಲ್ಲ ನಿಲ್ಲಿಸುವುದೂ ಇಲ್ಲ.

ಮಾಹಿತಿ ಕೇಳುವ ಹಕ್ಕನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಅಥವಾ ದೂರು ಸಲ್ಲಿಸಲು ನಿರ್ಭಂಧ ಹೇರಲಾಗುತ್ತಿದೆ. ಈ ಪ್ರಕ್ರಿಯೆಗೆ ಶ್ರೀನಿವಾಸ್‌ ಅವರ ಅವಧಿಯಲ್ಲಿ ಇನ್ನು ಹೆಚ್ಚಿನ ಚಾಲನೆ ದೊರೆಯಿತು. ಆದರೆ ಇದುವರೆವಿಗೂ ಇಂಥಹ ಆದೇಶಗಳಿಂದ ಭಾಧಿತರಾದ ಯಾರೊಬ್ಬರೂ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಿಲ್ಲ. ಆದರೆ ಗುಲಬರ್ಗಾ ನಿವಾಸಿಯಾದ ಶ್ರೀ. ಲಾಲ್‌ ಸಾಬ್‌ ಎಂಬುವವರು ಉಚ್ಚ ನ್ಯಾಯಾಲಯದಲ್ಲಿ ಅವರ 9000 ಅರ್ಜಿಗಳ ಮೇಲ್ಮನವಿಗಳನ್ಜು ತಿರಸ್ಕರಿಸಿದ ಮಾಹಿತಿ ಆಯೋಗದ ಆದೇಶವನ್ನು ಎತ್ತಿ ಹಿಡಿದು ಅವರಿಗೆ ರೂ. 9 ಲಕ್ಷ ರೂಗಳ ದಂಡವನ್ನು ವಿಧಿಸಿದ ಪ್ರಕರಣ ನಮ್ಮ ಮುಂದಿದೆ.ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಹಾಕುವ ಪ್ರವೃತ್ತಿಯನ್ನು ಖಂಡಿಸಿ ಇದು ಮಾಹಿತಿ ಹಕ್ಕಿನ ದುರುಪಯೋಗ ಎಂದು ಹಲವಾರು ಉಚ್ಛ ನ್ಯಾಯಾಲಯಗಳು ಹೊರಡಿಸಿದ ಆದೇಶಗಳು ಲಭ್ಯವಿದೆ. ಆದರೆ ಈ ಆದೇಶಗಳನ್ನು ಪ್ರಶ್ನಿಸಿ ತಡೆಯಾಗ್ನೆ ತರದ ಹೊರತು ಇದಕ್ಕೆ ಯಾವುದೇ ಪರಿಹಾರವಿಲ್ಲ.

2010 ರಲ್ಲಿ ಕರ್ನಾಟಕ ಮಾಹಿತಿ ಆಯೋಗದಲ್ಲಿ ಅರ್ಜಿದಾರರೊಬ್ಬರು 14000 ದೂರುಗಳನ್ನು ಸಲ್ಲಿಸಿದ ಪ್ರಸಂಗ ಇಂದಿಗೂ ಒಂದು ದಾಖಲೆಯೆನಿಸಿದೆ. ಆದರೆ ಈ ಎಲ್ಲ ಅರ್ಜಿಗಳು ಸೆಕ್ಷನ್‌ 4 ರ ಪ್ರಕಟಣೆಗೆ ಸಂಬಂಧಿಸಿದ್ದರಿಂದ ಅಂದಿನ ಮುಖ್ಯ ಆಯುಕ್ತರರಾಗಿದ್ದ ಶ್ರೀ. ಕೆ.ಕೆ.ಮಿಶ್ರಾ ಮತ್ತು ಆಯುಕ್ತರಾದ ಶ್ರಿ. ತಿಪ್ಪೇಸ್ವಾಮಿಯವರು ಎಲ್ಲ ಅರ್ಜಿಗಳನ್ಜು ಒಂದೇ ಬಾರಿಗೆ ವಿಚಾರಣೆ ನಡೆಸಿ ಅರ್ಜಿದಾರರು ಕೇಳಿರುವ ಮಾಹಿತಿ ಸೆಕ್ಷನ್‌ ೪ ಕ್ಕೆ ಸಂಬಂಧಿಸಿರುವುದರಿಂದ ಆ ಮಾಹಿತಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸುವಂತೆ ಆದೇಶಿಸಿ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಮಾಹಿತಿ ಹಕ್ಕಿನಲ್ಲಿ ಸಾವಿರಾರು ಅರ್ಜಿಗಳನ್ನು ಸಲ್ಲಿಸಿರುವ ಪ್ರಸಂಗಗಳು ಕರ್ನಾಟಕದಲ್ಲಿಯೇ ಅಧಿಕ.

ಈ ಹಿಂದೆ ಮಾಹಿತಿ ಆಯೋಗದಲ್ಲಿನ ಬಾಕಿ ಪ್ರಕರಣಗಳ ವಿಲೇವಾರಿಗೆ ಮಾಹಿತಿ ಆಯುಕ್ತರಾಗಿದ್ದ ಶ್ರೀ. ಎಲ್. ಕೃಷ್ಣಮೂರ್ತಿಯವರು ಬೆಂಗಳೂರು ಮಹಾನಗರ ಪಾಲಿಕೆಯ ಸುಮಾರು ಐದು ಸಾವಿರ ಅರ್ಜಿಗಳನ್ನು ಲೋಕ ಅದಾಲತ್‌ ಮೂಲಕ ವಿಲೇವಾರಿ ಮಾಡಿರುವುದನ್ನು ಇಲ್ಲಿ ಸ್ಮರಿಸಬೇಕಾಗಿದೆ. ಅದೇ ರೀತಿ ಅನೇಕ ಜಿಲ್ಲೆಗಳಲ್ಲಿ ವಿಚಾರಣೆ ನಡೆಸಿ ಸಾವಿರಾರು ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.

ಮಾಹಿತಿ ಆಯೋಗದ ಆದೇಶಗಳಲ್ಲಿ ಉಚ್ಛ ನ್ಯಾಯಾಲಯದ ಆದೇಶಗಳನ್ನು ಆಧರಿಸಿ ಕಪ್ಪು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಯಾವುದೇ ಆದೇಶಗಳಲ್ಲಿ ಅರ್ಜಿದಾರರು ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಲು ನಿರ್ಬಂಧ ಹೇರಿರುವುದಿಲ್ಲ. ಕೇವಲ ಮಾಹಿತಿ ಆಯೋಗದಲ್ಲಿ ಮೇಲ್ಮನವಿ ಅಥವಾ ದೂರು ಸಲ್ಲಿಸಲು ನಿರ್ಬಂಧ ಹೇರಲಾಗಿದೆ. ಅಂಥಹ ಆದೇಶಗಳನ್ನು ಉಚ್ಛ ನ್ಯಾಯಾಲಯಗಳಲ್ಲಿ ಸಂಬಂಧಿಸಿದ ಅರ್ಜಿದಾರರು ಪ್ರಶ್ನಿಸಿ ಪರಿಹಾರ ಪಡೆಯಬಹುದು.

ಕಪ್ಪು ಪಟ್ಟಿಗೆ ಸೇರಿಸುವುದು ಅತ್ಯಂತ ಗಂಭೀರವಾದ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಘನೆಯಾಗುವುದು ಎಂಬುದು ಒಂದು ವಾದವಾದರೆ ಒಬ್ಬ ವ್ಯಕ್ತಿ ಸಾವಿರಾರು ಮೇಲ್ಮನವಿ ಸಲ್ಲಿಸುವುದರಿಂದ ಮಾಹಿತಿ ಆಯೋಗಗಳಿಗೆ ಹೆಚ್ಚಿನ ಹೊರೆ ಉಂಟಾಗುವುದಲ್ಲದೆ ಒಂದೆರಡು ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಅನಗತ್ಯ ವಿಳಂಬ ಉಂಟಾಗುವುದೆಂಬುದು ಕೆಲವರ ವಾದ..ಮಾಹಿತಿ ಆಯೋಗದಲ್ಲಿ ಒಂದು ಮೇಲ್ಮನವಿ ವಿಲೇವಾರಿಗೆ ಸುಮಾರು ಐದು ಸಾವಿರದಿಂದ ಹತ್ತು ಸಾವಿರ ರೂಗಳ ವೆಚ್ಚ ಉಂಟಾಗುತ್ತಿದೆ. ಕೆಲವು ಪ್ರಕರಣಗಳ ವಿಚಾರಣೆಗೆ ಐದಕ್ಕೂ ಹೆಚ್ಚುಬಾರಿ ಮುಂದೂಡಿದರೆ ಅಂಥಹ ಪ್ರಕರಣಗಳ ವೆಚ್ಚ ಹತ್ತು ಸಾವಿರ ರೂಗಳಿಗೂ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರೆನಿಸಿಕೊಂಡವರು ಸಾವಿರಾರು ಮೇಲ್ಮನವಿ ಸಲ್ಲಿಸುವ ಮುನ್ನ ಸಂಯಮದಿಂದ ವರ್ತಿಸುವುದು ಅವಶ್ಯಕ.

ಮಾಹಿತಿ ಆಯೋಗದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಶ್ರೀ. ಲಿಂಗರಾಜ ಅವರು ತಮ್ಮ ಐದು ವರ್ಷದ ಅವಧಿಯಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ದಂಡ ವಿಧಿಸಿದ್ದರು. ಅದೇ ರೀತಿ ಶ್ರೀ ಶ್ರೀನಿವಾಸ್‌ ಅವರೂ ಕೂಡ ತಮ್ಮ ಐದು ವರ್ಷದ ಅವಧಿಯಲ್ಲಿ ಕೇವಲ ಹತ್ತು ಪ್ರಕರಣಗಳಲಿ ದಂಡ ವಿಧಿಸಿರುವುದನ್ನು ಗಮನಿಸಬೇಕಾಗಿದೆ.

ಪ್ರಸ್ತುತ ಮಾಹಿತಿ ಆಯೋಗದ ಪ್ರಭಾರಿ ಮುಖ್ಯ ಆಯುಕ್ತರಾಗಿರುವ ಶ್ರೀ. ಹೆಚ್.ಸಿ.ಸತ್ಯನ್‌ ಅವರು ತಮ್ಮ 54 ತಿಂಗಳ ಕಾರ್ಯಾವಧಿಯಲ್ಲಿ ಸುಮಾರು ನಾಲ್ಕು ಕೋಟಿ ರೂಗಳ ದಂಡವನ್ನು ವಿಧಿಸಿರುವುದಲ್ಲದೆ ದಂಡದ ಬಹುಪಾಲು ಹಣವನ್ನು ವಸೂಲು ಮಾಡಿರುವುದು ಇಂದಿಗೂ ಒಂದು ದಾಖಲೆಯೆನಿಸಿದೆ. ಹಲವಾರು ಮೇಲ್ಮನವಿದಾರರಿಗೆ ಮಾಹಿತಿ ಮತ್ತು ಪರಿಹಾರವನ್ನು ಕೊಡಿಸುವ ಮೂಲಕ ಮಾಹಿತಿ ಹಕ್ಕಿನ ಅನುಷ್ಠಾನದಲ್ಲಿ ಅವರು ನೀಡಿರುವ ಕೊಡುಗೆ ಶ್ಲಾಘನೀಯ.. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಕೆಲವು ಬೆರಳೆಣಿಕೆಯಷ್ಟು ವ್ಯಕ್ತಿಗಳು ಆಧಾರ ರಹಿತ ಆಪಾದನೆಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವುದು ಎಷ್ಟು ಸಮಂಜಸ?

ಒಂದು ಅರ್ಜಿಯನ್ನು ಸಲ್ಲಿಸಿ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸುವ ತನಕ ಒಂದು ಅರ್ಜಿಗೆ ಸುಮಾರು ಐದು ನೂರು ರೂಗಳಿಂದ ಒಂದು ಸಾವಿರ ರೂಗಳವರೆಗೆ ವೆಚ್ಚ ಉಂಟಾಗುತ್ತದೆ. ಒಂದು ಸಾವಿರ ಮೇಲ್ಮನವಿ ಸಲ್ಲಿಸಲು ಕನಿಷ್ಠ ಐದು ಲಕ್ಷ ರೂಗಳ ವೆಚ್ಚವನ್ನು ಭರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ. ಸತ್ಯನ್‌ ಅವರ ಆದೇಶಗಳು ಸಂವಿಧಾನ ವಿರೋಧಿ ಎನಿಸಿದರೆ ಉಚ್ಚ ನ್ಯಾಯಾಲಯದ ಮೊರೆ ಹೋಗುವುದು ಸರಿಯಾದ ಕ್ರಮ ಎನ್ನುವುದು ನನ್ನ ವೈಯಕ್ತಿಕ ಭಾವನೆ.

ಮಾಹಿತಿ ಹಕ್ಕಿನ ಸೆಕ್ಷನ್‌ ನಾಲ್ಕರ ಪ್ರಕಟಣೆಯನ್ನು ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ತಮ್ಮ ಅಂತರ್ಜಾಲದಲ್ಲಿ ಪ್ರಕಟಿಸಿದರೆ ಸುಮಾರು ಶೇಕಡಾ 90 ರಷ್ಟು ಮಾಹಿತಿ ಹಕ್ಕಿನ ಅರ್ಜಿಗಳು ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಗ್ರಾಮ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯ ಎಲ್ಲಾ ಕಾಮಗಾರಿಗಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸಿದರೆ ಮಾಹಿತಿ ಹಕ್ಕಿನಲ್ಲಿ ಅರ್ಜಿಸಲ್ಲಿಸುವ ಸಂಭವವೇ ಇರುವುದಿಲ್ಲ. ಸೆಕ್ಷನ್ ೪ ರ ಅನುಷ್ಠಾನದ ಬಗ್ಗೆ ನಾಗರೀಕರು ಮತ್ತು ಮಾಹಿತಿ ಆಯೋಗಗಳು ಹೆಚ್ಚಿನ ಗಮನ ಹರಿಸುವ ಮೂಲಕ ಮಾಹಿತಿಹಕ್ಕನ್ನು ಬಲಯುತಗೊಳಿಸಬಹುದು ಎಂಬುದು ನನ್ನ ಅಭಿಪ್ರಾಯ.

ನಿಮ್ಮ ಟೀಕೆ ಟಿಪ್ಪಣಿಗಳನ್ನು ಗೌರವ ಪೂರ್ವಕವಾಗಿ ಸ್ವೀಕರಿಸಲಾಗುವುದು.


ಬಿ.ಹೆಚ್. ವೀರೇಶ

ಮಾಹಿತಿಹಕ್ಕು ಅಧ್ಯಯನ ಕೇಂದ್ರ ಬೆಂಗಳೂರು.

ದಿನಾಂಕ: 28.01.2025



ಗುಜರಾತ್ ಹೈ ಕೋರ್ಟ್ SCA 18416/2023 ತೀರ್ಪು

07/01/2025

(2025:GUJHC:1381)


ಪ್ರಕರಣದ ಸಂಕ್ಷಿಪ್ತ ವಿವರಣೆ ಹೀಗಿದೆ..


ಇದು ಮಹೇಶ್‌ ಭಾಯಿ ಎಮ್. ಬುದ್ರಾಣಿ‌ ಎಂಬುವವರ ವಿರುದ್ಧ ಗುಜರಾತ್ ರಾಜ್ಯ ಮತ್ತು ಇತರರು ದಾಖಲಿಸಿದ್ದ ಪ್ರಕರಣವಾಗಿದೆ. ಅರ್ಜಿದಾರರು ಆರ್‌ಟಿಐ ಕಾರ್ಯಕರ್ತರಾಗಿದ್ದು, ಪ್ರಾಧಿಕಾರಗಳು ತಮ್ಮನ್ನು "ಬ್ಲಾಕ್‌ಲಿಸ್ಟ್" ಗೆ ಸೇರಿಸಲಾಗಿದ್ದು, ಆರ್‌ಟಿಐ ಕಾನೂನಿನ ಅಡಿಯಲ್ಲಿ ಮಾಹಿತಿಯನ್ನು ನೀಡಲು ನಿರಾಕರಿಸುತ್ತಿದ್ದಾರೆ ಎಂದು‌ ಅವರು ಆರೋಪಿಸಿದ್ದರು. ಅವರು ದಿ:11.7.2023 ರಂದು ಗುಜರಾತ್ ಮಾಹಿತಿ ಆಯೋಗದಿಂದ ಜಾರಿಗೆ ಬಂದ ಆದೇಶವನ್ನು ರದ್ದು ಗೊಳಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ತಮ್ಮ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಎಂದು ವಾದಿಸಿದ್ದರು.


ನ್ಯಾಯಾಲಯವು ಗಮನಿಸಿದಂತೆ ಅರ್ಜಿದಾರರು ನಿರಂತರವಾಗಿ ಆರ್‌ಟಿಐ ಅರ್ಜಿಗಳನ್ನು ಕಳುಹಿಸಿ ನೌಕರರಿಗೆ ಕಿರುಕುಳ ನೀಡಿದ್ದರು, ಮತ್ತು ಈ ನಡವಳಿಕೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಯೋಗ ತೀರ್ಮಾನಿಸಿತ್ತು. ಅರ್ಜಿಯಲ್ಲಿ ಯಾವುದೇ ಆಧಾರಗಳು ಅಥವಾ ತೀರ್ಪಿನ ವಿರುದ್ಧ ಸೂಕ್ತ ಅಂಶಗಳು ಇಲ್ಲದಿರುವುದರಿಂದ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು. ನ್ಯಾಯಾಧೀಶ ಅನಿರುದ್ಧ ಪಿ. ಮಾಯೀ ಅವರಿಂದ ತೀರ್ಪು ನೀಡಲಾಯಿತು ಮತ್ತು ಯಾವುದೇ ಖರ್ಚು ವೆಚ್ಚಗಳನ್ನು ವಿಧಿಸಲಿಲ್ಲ.


ಮತ್ತೊಂದು ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ಧಾರವಾಡದ ನ್ಯಾಯಪೀಠದಲ್ಲಿ ಜಾರಿಯಾದ

ಕಪ್ಪುಪಟ್ಟಿ ಆದೇಶ:


1)ವಿವಾದ ಸಾರಾಂಶ: ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ರಿಟ್ ಪಿಟೀಷನ್ ಸಂಖ್ಯೆ 101260/2024 ಶ್ರೀ ದವಳಸಾಬ್ ಎಂ. ಮಿಯಾನಾವರ್ ಅವರಿಂದ ದಾಖಲಿಸಲಾಯಿತು. ನ್ಯಾಯಾಧೀಶರಾದ ಸಚಿನ್ ಶಂಕರ್ ಮಗದುಮ್ ಅವರ ಅಧ್ಯಕ್ಷತೆಯೊಂದಿಗೆ, 2024ರ ಸೆಪ್ಟೆಂಬರ್ 25 ರಂದು ಪ್ರಕರಣದ ತೀರ್ಪು ಪ್ರಕಟಿಸಲಾಯಿತು. ಅರ್ಜಿದಾರರು ಆರ್‌ಟಿಐ ಕಾರ್ಯಕರ್ತರಾಗಿದ್ದು, ಕರ್ನಾಟಕದ 14 ಇಲಾಖೆಗಳಲ್ಲಿ ವಿವಿಧ ಮಾಹಿತಿಗಾಗಿ 9,646 ಅಪೀಲ್ ಗಳನ್ನು ಕರ್ನಾಟಕ ಮಾಹಿತಿ ಆಯೋಗದ (KIC) ಮುಂದೆ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಗಳು ಮತ್ತು ಅಪೀಲ್ ಗಳು ತತ್ಕಾಲೀಕ ಮತ್ತು ಅನಾವಶ್ಯಕ ಮಾಹಿತಿಗಾಗಿ ಸಲ್ಲಿಸಿದ್ದವು ಎಂದು ಆಯೋಗ ಸ್ಪಷ್ಟಪಡಿಸಿ, ಎಲ್ಲಾ ಅಪೀಲ್ ಗಳನ್ನೂ ತಿರಸ್ಕರಿಸಿತು.


2)ತೀರ್ಪು: ನ್ಯಾಯಾಲಯವು KIC ತೀರ್ಪನ್ನು ಸಮರ್ಥಿಸಿ, ಅರ್ಜಿದಾರರು Rs.9,64,600 ಪಾವತಿಸಬೇಕೆಂಬ ಆದೇಶ ನೀಡಿತು. ಈ ಪ್ರಕರಣದಲ್ಲಿ, ಆರ್‌ಟಿಐ ಅಡಿನಂತೆ ಅರ್ಜಿದಾರರು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಸ್ಪಷ್ಟತೆಯ ಪತ್ತೆ ನಡೆಯಿತು. ಅತ್ಯಧಿಕ ಅರ್ಜಿಗಳು ಸಾರ್ವಜನಿಕ ಇಲಾಖೆಗಳ ಆಡಳಿತದಲ್ಲಿ ಅಡಚಣೆ ತಂದಿದ್ದವು. ಹೀಗಾಗಿ, ಈ ರಿಟ್ ಪಿಟೀಷನ್ ಅನ್ನು ನ್ಯಾಯಾಲಯವು ತಿರಸ್ಕರಿಸಿತು ಮತ್ತು ಕೋರ್ಟ್ ಶುಲ್ಕದ ಪಾವತಿಗಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತು.

Recently Updated:

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ  ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.!  ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.! ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,
ದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರ
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.
ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ.. ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ..
ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ  ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ  ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ( ರಿ.,) ಬೆಂಗಳೂರು    ವಿಧಾನಸೌಧ ಮಾಧ್ಯಮದವರಿಗೆ ಪ್ರವೇಶ ನಿಬಂಧ-  ರಾಜ್ಯ ಸಂಘ ಖಂಡನೆ ಮಾಧ್ಯಮದವರ ಮೇಲೆ ವಿಧಾನಸೌಧ ಪ್ರವೇಶಿಸಲು ನಿಷೇಧ ಹೇರುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ.ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ( ರಿ.,) ಬೆಂಗಳೂರು ವಿಧಾನಸೌಧ ಮಾಧ್ಯಮದವರಿಗೆ ಪ್ರವೇಶ ನಿಬಂಧ- ರಾಜ್ಯ ಸಂಘ ಖಂಡನೆ ಮಾಧ್ಯಮದವರ ಮೇಲೆ ವಿಧಾನಸೌಧ ಪ್ರವೇಶಿಸಲು ನಿಷೇಧ ಹೇರುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ.
ಸಾರಿಗೆ ನೌಕರರ ಮುಷ್ಕರ. ಕರ್ನಾಟಕ ಸಾರಿಗೆ ನೌಕರರು ತಮ್ಮ 38 ತಿಂಗಳ ಹಿಂಬಾಕಿಯನ್ನು ಮತ್ತು 2024 ರಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇಂದು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಆದರೆ, ಬೆಂಗಳೂರು ಚಲೋಗೆ ರಾಜ್ಯದ ನಾನಾ ಭಾಗಗಳಿಂದ ಸಾರಿಗೆ ನೌಕರರು ಆಗಮಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜಮಾಯಸಾರಿಗೆ ನೌಕರರ ಮುಷ್ಕರ. ಕರ್ನಾಟಕ ಸಾರಿಗೆ ನೌಕರರು ತಮ್ಮ 38 ತಿಂಗಳ ಹಿಂಬಾಕಿಯನ್ನು ಮತ್ತು 2024 ರಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇಂದು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಆದರೆ, ಬೆಂಗಳೂರು ಚಲೋಗೆ ರಾಜ್ಯದ ನಾನಾ ಭಾಗಗಳಿಂದ ಸಾರಿಗೆ ನೌಕರರು ಆಗಮಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜಮಾಯ
ಸಿದ್ದರಾಮಯ್ಯ  ಪಾಪರ್‌ ಮುಖ್ಯಮಂತ್ರಿಯಾಗಿದ್ದಾರೆ  ಸರ್ಕಾರ ದಿವಾಳಿಯಾಗಿದ್ದರೂ ಶಾಸಕರ ಫಾರಿನ್‌ ಟೂರ್‌. ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶಸಿದ್ದರಾಮಯ್ಯ ಪಾಪರ್‌ ಮುಖ್ಯಮಂತ್ರಿಯಾಗಿದ್ದಾರೆ ಸರ್ಕಾರ ದಿವಾಳಿಯಾಗಿದ್ದರೂ ಶಾಸಕರ ಫಾರಿನ್‌ ಟೂರ್‌. ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ