ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ತಾಲೂಕಿನ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಚನ್ನರಾಯಪಟ್ಟಣ ವತಿಯಿಂದ ಕೆಲವು ಸಂಘಟನೆಗಳಿಂದ ಚನ್ನರಾಯಪಟ್ಟಣದ ಗಾಂಧಿ ಸರ್ಕಲ್ ನಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲರ್ಪಣೆ ಮಾಡಿ ಅಲ್ಲಿಂದ ಕೋರ್ಟ್ ಹತ್ತಿರದಿಂದ ಪೊಲೀಸ್ ಸ್ಟೇಷನ್ ಸರ್ಕಲ್ ನವರಿಗೆ ಕಾಲ್ ನಡಿಗೆಯಲ್ಲಿ ನಡೆದುಕೊಂಡು ಬಂದು ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ಕೈಗೊಳ್ಳಲಾಗಿದೆ. ತಹಸಿಲ್ದಾರ್ ರವರು ಧರಣಿಗೆ ಸ್ಪಂದಿಸಿ ಮನವಿಯನ್ನು ಸ್ವೀಕರಿಸಿದರು ಮುಂದಾಗುವ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ತಹಶೀಲ್ದಾರ್ ಅವರು ತಿಳಿಸಿದರು.
ವರದಿ,: ಶಂಕರೇಗೌಡ ಹುಲಿಕೆರೆ.








