ಮಾನವ ಹಕ್ಕು ಸಂಸ್ಥೆಗೆ ಅವಮಾನ, ಪತ್ರಿಕಾ (ಮಾಧ್ಯಮದವರಿಗೂ) ಅವಹೇಳನ (ನಿಂದನೆ) ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ನಿಂದನೆ ಮಾಡಿದ್ದಾರೆಂದು
ವಕೀಲರಾದ ನೀಲ್ ಮತ್ತು ಅಜಿತ್ ಶೆಟ್ಟಿ ಅವರ ವಿರೋಧ ದೇವೇಂದ್ರ ಸುವರ್ಣ ಇವರಿಂದ ಬ್ರಹ್ಮಾವರ ಪೋಲಿಸ್ ವೃತ್ತ ನಿರೀಕ್ಷಕರಿಗೆ ದೂರು ನೀಡಿರುತ್ತಾರೆ.
ಮಾನವ ಹಕ್ಕು ಸಂಸ್ಥೆಗೆ ಅವಮಾನ, ಪತ್ರಿಕಾ (ಮಾಧ್ಯಮದವರಿಗೂ) ಅವಹೇಳನ (ನಿಂದನೆ) ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ನಿಂದನೆ.
ವಕೀಲರಾದ ನೀಲ್ ಮತ್ತು ಅಜಿತ್ ಶೆಟ್ಟಿ ಅವರಿಂದ ಜೀವ ಬೆದರಿಕೆ, ಮಾನ ಹಾನಿ, ಮೊಬೈಲ್ ನಲ್ಲಿ ಮಾತಾಡುವಾಗ ಉನ್ನತ ಸ್ಥಾನದಲ್ಲಿರುವ ತಾಲೂಕು ದಂಡಾಧಿಕಾರಿಯವರ ಬಗ್ಗೆ ಪ್ರಸ್ತಾಪ, ಸಂವಿಧಾನದ ಒಂದು ಅಂಗವಾದ ಮಾನವ ಹಕ್ಕು ಸಂಸ್ಥೆಗೆ ಅವಮಾನ, ಪತ್ರಿಕಾ (ಮಾಧ್ಯಮದವರಿಗೂ) ಅವಹೇಳನ (ನಿಂದನೆ) ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ನಿಂದನೆ ಮಾಡಿರುತ್ತಾರೆ.
ಉಡುಪಿ ತಾಲೂಕು ಕುಕ್ಕೆಹಳ್ಳಿ ಗ್ರಾಮದಲ್ಲಿ ಕೊಜೆ ಮಣ್ಣುಗಾರಿಕೆ ಬಗ್ಗೆ ಅಂದಾಜು ದಿನಾಂಕ -23-01-2025 ರಂದು ಗಣಿ ಇಲಾಖೆ ಮತ್ತು ಹಿರಿಯಡ್ಕ ಪೋಲಿಸರು ಕಾನೂನು ಕ್ರಮ ಕೈಗೊಂಡ ಬಗ್ಗೆ ಕೆಲವು ಪತ್ರಿಕೆ ಮಾಧ್ಯಮಗಳಲ್ಲಿ ಬಂದ ವೀಡಿಯೊ ತುಣುಕನ್ನ ನಾನು ನನ್ನ ಮೊಬೈಲ್ ಸ್ಟೇಟಸ್ ನಲ್ಲಿ ದಿನಾಂಕ 26-01-2025 ರಂದು ಹಾಕಿ ಕೊಂಡಿದ್ದಕ್ಕೆ ವಡ್ಡರ್ಸೆ ಯ ಅಜಿತ್ ಶೆಟ್ಟಿ ಎಂಬುವವನು ನನಗೆ ಪೋನ್ ಕಾಲ್ ಮಾಡಿ ನಿಮ್ಮ ಮೊಬೈಲ್ ಸ್ಟೇಟಸ್ ನಲ್ಲಿ ನನ್ನ ಬಗ್ಗೆ ಇರುವ ಪ್ರಕರಣ ಸುಳ್ಳು. ಇಂತ ರೋಲ್ ಕಾಲ್ ಚಾನೆಲ್ಗಳನ್ನು ನಾನು ಎಷ್ಟೋ ನೋಡಿದ್ದೀನಿ. ನಾನು ನಾಳೆನೆ ಪತ್ರಿಕೆ ಮಾಡುವ ಪವರ್ ನನಗಿದೆ. ನನ್ನ ಪ್ರಕರಣದ ಬಗ್ಗೆ ಭಹಿರಂಗ ಪಡಿಸಿರುವ ಚಾನೆಲ್ ನವರನ್ನು ಬಂದ್ ಮಾಡಿಸುವುದಕ್ಕೆ ದೂರು ದಾಖಲಿಸುತ್ತೇನೆ ಎಂದು ವ್ಯಂಗ್ಯ ಮಾತಿನೊಂದಿಗೆ ಹಾಗೂ ಹಿರಿಯಡ್ಕ ಪೋಲೀಸರ ಮೇಲು ಕೇಸು ಹಾಕಿದ್ದೇನೆ. ನನಗೆ ಪೋಲಿಸ್ IG ಸಂಪರ್ಕ ಇರುವುದರಿಂದ ಇದೆಲ್ಲಾ ನನಗೆ ಯಾವ ಲೆಕ್ಕ ಇಲ್ಲ. ನಿಮ್ಮ ಮೊಬೈಲ್ ಸ್ಟೇಟಸ್ ನಲ್ಲಿರುವುದನ್ನ ತೆಗೆಯಿರಿ. ಅದನ್ನು ತೆಗೆಯಿರಿ ಎಂದಿದ್ದಕ್ಕೆ ನಾನು ಡಿಲಿಟ್ ಮಾಡಿರುತ್ತೇನೆ. ಆದರೂ ದಿನಾಂಕ 03-02-25 ರಂದು ವಕೀಲರಾದ ನೀಲ್ ಪೆರಿಯರ್ ಎಂಬ ವ್ಯಕ್ತಿಯು ನನಗೆ ಫೋನ್ ಮಾಡಿ ನನ್ನ ಕಕ್ಷಿದಾರ ಅಜಿತ್ ಶೆಟ್ಟಿ ಯ ಕೊಜೆ ಪ್ರಕರಣ ಮಾಧ್ಯಮದವರಿಗೆ ಮತ್ತು ಪೋಲಿಸರಿಗೆ ನೀನು ಮಾಹಿತಿ ನೀಡಿದ್ದು ನಮ್ಮ ವ್ಯವಹಾರಕ್ಕೆ ಅಡ್ಡಿಪಡಿಸಿದ್ದೀಯ. ನಿನಗೆ 2000 ರೂ ಹಣ ಹಾಕಿದ್ದೇವೆ ಎಂದು ಸುಳ್ಳು ಹೇಳಿದ್ದು ಅಲ್ಲದೆ ನನ್ನ ಕಕ್ಷಿದಾರನ ವಿಷಯಕ್ಕೆ ಬಂದರೆ ನಿನ್ನ ಕೈ ಕಾಲು ಮುರಿದು ಮನೆಯಲ್ಲೇ ಮಲಗುವ ಹಾಗೆ ಮಾಡುತ್ತೇನೆ. ಇದು ಆಗದಿದ್ದಲ್ಲಿ ಸುಳ್ಳು ಕೇಸ್ ಹಾಕಿ ನಿನ್ನನ್ನೇ ಜೈಲಿಗೆ ಕಳುಹಿಸುವಷ್ಟು ತಾಕತ್ತು ನನ್ನಲ್ಲಿದೆ. ನಿನಗೇನಾದರೂ ನಮ್ಮನ್ನ ಏನಾದರು ಮಾಡಲಿಕೆ ಆಗುತ್ತಿದೆಯೋ ನೋಡು ಎಂದು ಗೂಂಡ ವರ್ತನೆ ಮೂಲಕ ನನಗೆ ಜೀವ ಬೆದರಿಕೆ ಹಾಕಿದ್ದು ಅಲ್ಲದೇ ನಮ್ಮ ವಿಷಯಕ್ಕೆ ಯಾರೇ ದೊಡ್ಡ ನಾಯಕನನ್ನ ಬೇಕಾದರೂ
ಕರೆದುಕೊಂಡು ಬಾ ನಾನು ಏನೆನ್ನುವುದು ತೋರಿಸುತ್ತೇನೆ ಆತನಿಗೆ. ನಾನೇ ದೊಡ್ಡ ಪ್ರಭಾವಿ ವ್ಯಕ್ತಿಯಾಗಿದ್ದು ನಮ್ಮ ಕಕ್ಷಿದಾರನ ತಂಟೆಗೆ ಬಂದರೆ ನನ್ನ ಎರಡನೇ ಮುಖ ತೋರಿಸಬೇಕಾಗುತ್ತೆ ಎಂದು ನನಗೆ ದಮ್ಕಿ ಹಾಕಿದ್ದುದ್ದಲ್ಲದೇ ನೀನು ಮಾನವ ಹಕ್ಕು ಸಂಘಟನೆಯ ಕಾರ್ಯದರ್ಶಿಯಾಗಿದ್ದಿಯ ನಿನ್ನ ಮಾನವ ಹಕ್ಕು ಸಂಘಟನೆಗೆ ಲೈಸೆನ್ಸ್ ಇದೆಯಾ. ನಿನ್ನ ಮಾನವ ಹಕ್ಕು ಸಂಘಟನೆ ಶಾ******* (ಅವಾಚ್ಯ ಶಬ್ದ) ಸಮಾನ. ನೀನು ಮೊಬೈಲ್ ರೆಕಾರ್ಡಿಂಗ್ ಮಾಡಿಕೊಂಡು ನಿನ್ನ ಸಂಘಟನೆಗೆ ಕಳುಹಿಸು ಯಾರು ಏನು ಮಾಡಿಕೊಳ್ಳುತ್ತಾರೋ ನಾನು ನೋಡಿಕೊಳ್ಳುತ್ತೇನೆ. ಎಂಬುದಾಗಿ ಹೇಳಿದ್ದು ಈ ಹೇಳಿಕೆ ನನ್ನ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ನಮ್ಮ ಸಂಘಟನೆ ಕಾನೂನು ಪ್ರಕಾರ ಏನೇನೋ ದಾಖಲೆಗಳು ಬೇಕು. ನಿಯಮ ಪ್ರಕಾರ ಇದ್ದು ಈ ಸಂಘಟನೆ ಸಂವಿಧಾನದ ಒಂದು ಅಂಗವಾಗಿದ್ದು ಅಲ್ಲದೆ ಜನ ಸೇವಾ ಸಂಸ್ಥೆ ಆಗಿರುತ್ತದೆ. ನಮ್ಮ ಸಂಸ್ಥೆಗೆ ಅವಮಾನ ಮಾಡಿದ ವಕೀಲರಾದ ನೀಲ್ ಪೆರಿಯರ್ ಮತ್ತು ಕುಮ್ಮಕ್ಕು ನೀಡಿರುವ ಅಜಿತ್ ಶೆಟ್ಟಿ ಯನ್ನು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದು. ಹಾಗೂ ವಕೀಲರಾದ ನೀಲ್ ಎಂಬಾತ ಈ ಪೋನ್ ಕರೆಯಲ್ಲಿ ಕೊನೆಯದಾಗಿ ಬ್ರಹ್ಮಾವರ ಮಾನ್ಯ ತಾಲೂಕು ತಹಶೀಲ್ದಾರ್ ನನಗೆ ನನ್ನ ಮೊಬೈಲ್ ಕಸಿದುಕೊಂಡು ಎರಡು ಕೆನ್ನೆಗೆ ಹೊಡೆದದ್ದು ವಕೀಲರಾದ ನೀಲ್ ಪೆರಿಯರ್ ಇದನ್ನು ವ್ಯಂಗ್ಯದ ಮೂಲಕ ಹೇಳಿದ್ದು ಹೇಳಿದ್ದು ನಿನ್ನ ಸಂಘಟನೆಗೆ ಏನಾದರೂ ಮಾಡಲಿಕ್ಕೆ ಆಗಿದೆಯಾ ಎಂಬುದಾಗಿ ಕಾನೂನು ಓದಿದ ಅದರಲ್ಲೂ ಜನರಿಗೆ ನ್ಯಾಯ ನೀಡುವಂತ ವಕೀಲ ವೃತ್ತಿ ಮಾಡುತ್ತಿರುವವನು ಹಾಗೂ ಈ ವಕೀಲ ರಾದ ನೀಲ್ ಪೆರಿಯಾರ್ ಇವನ ಅಮ್ಮ ಬ್ರಹ್ಮಾವರ ತಾಲೂಕು ಕಂದಾಯ ಇಲಾಖೆಯಲ್ಲೇ ಗ್ರಾಮ ಆಡಳಿತ ಅಧಿಕಾರಿಯಾಗಿದ್ದು ಇವರ ಮೇಲಾಧಿಕಾರಿಯವರ ಮೇಲೆ ಈ ರೀತಿ ಸ್ಪಷ್ಟವಾಗಿ ಹೇಳಿದ್ದು ನೋಡಿದರೆ, ಇವರು ಈ ಘಟನೆ ನೋಡಿರುತ್ತಾರೆ. ಬ್ರಹ್ಮಾವರ ತಾಲೂಕು ಮಾನ್ಯ ತಹಶೀಲ್ದಾರರು (ಶ್ರೀಕಾಂತ್ ಹೆಗ್ಡೆಯವರು) ನನಗೆ ಹೊಡೆದಿದ್ದರಿಂದ ತಹಶೀಲ್ದಾರರ ಮೇಲೆ ಕಾನೂನು ಕ್ರಮ ಕೈಗೊಂಡು, ಈ ಹಿಂದೆ ತಹಶೀಲ್ದಾರರ ಮೇಲೆ ನಾನು ದೂರು ನೀಡಿದ್ದು ಸಾಕ್ಷಿ ಇಲ್ಲದೇ ದೂರು ದಾಖಲಿಸಿಕೊಂಡಿಲ್ಲ. ಈ ಘಟನೆ ಸುಳ್ಳಾದರೆ ಇದನ್ನು ಇದನ್ನು ಹೇಳಿರುವ ವಕೀಲರಾದ ನೀಲ್ ಪೆರಿಯರ್ ನನಗೆ ಮಾನ ಹರಾಜು (ನಷ್ಟ) ಮಾಡಿದಂತಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ. ಇದಾದ ಮೇಲೆ ರಾತ್ರಿ ಅಂದಾಜು 8.50 ಕ್ಕೆ ಅಜಿತ್ ಶೆಟ್ಟಿ ನನಗೆ ಪೋನ್ ನಲ್ಲಿ ಮಾತಾಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ನಿಂದನೆ ಮಾಡಿದ್ದು ನನ್ನ ಮೊಬೈಲ್ ರೆಕಾರ್ಡ್ ಆಗಿದ್ದು ಹಾಗೂ ಅಜಿತ್ ಎಂಬ ಈ ವ್ಯಕ್ತಿಯು ಬೇರೆಯವರಿಗೆಲ್ಲ ಕಾಲ್ ಮಾಡಿ ನಾನು ಎಂಥೆಂತ ಪ್ರಕರಣಗಳನ್ನ ಜಯಿಸಿ ನೀರು ಕುಡಿದು ಬಂದವನು. ಇವನನ್ನು ಮುಗಿಸುವುದು ಯಾವ ಲೆಕ್ಕ ನನಗೆ ಎಂದು ಹೇಳುತ್ತಿದ್ದು, ನನಗೂ ಫೋನ್ ಮಾಡಿ ನನ್ನ ಕೊಜೆ ಹೊಂಡ ಜಾಗಕ್ಕೆ ನೀವು ಬಂದಿರುತ್ತೀರಿ. ಈ ವೀಡಿಯೋ ನನ್ನ ಸಿ ಸಿ ಕ್ಯಾಮೆರಾ ದಲ್ಲಿದೆ ಎಂದು ಪದೇ ಪದೇ ಫೋನ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದು ಇವರ ಹಿಂದಿನ ಜೀವನ ಶೈಲಿ, ಈಗ ಮಾಡುತ್ತಿರುವ ರೀತಿ ನನ್ನನ್ನು ಅಪಾಯದ ಸ್ಥಿತಿಗೆ ತರುವ ಲಕ್ಷಣ ಕಾಣುತ್ತಿದ್ದು ಇವರಿಗೆ ರಾಜಾಕಿಯ ಪ್ರಭಾವ ವ್ಯಕ್ತಿಗಳ ಒಡನಾಟ ಇರುವುದರಿಂದ, ಇವರು ನಟೋರಿಯಸ್ ವರ್ತನೆಯಂತೆ ಕಂಡು ಬರುತ್ತಿರುವುದರಿಂದ ನನಗೂ ನನ್ನ ಕುಟುಂಬಕ್ಕೂ ಏನಾದರೂ ಆದಲ್ಲಿ ಈ ಎರಡು ವ್ಯಕ್ತಿಗಳು ಕಾರಣ ಎಂದು ತಿಳಿಸುತ್ತಾ, ಈ 2 ವ್ಯಕ್ತಿಗಳ ಬಗ್ಗೆ ಕಾನೂನು ಕ್ರಮ ಕೈಗೊಂಡು ಇವರ ವರ್ತನೆ ಗೂಂಡಗಿರಿಯಂತೆ ಕಂಡುಬರುತ್ತಿದ್ದು ಇವರಿಂದ ನನಗೆ ಜೀವ ಭಯ ಇರುತ್ತದೆ. ಆದ್ದರಿಂದ ದಯವಿಟ್ಟು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ವಿಶ್ವ ಮಾನವಾಧಿಕಾರ ಹಕ್ಕು ಲೋಕಪರಿಷತ್ತು, ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ಸರ್ವ ಸದಸ್ಯರು








