ಚನ್ನರಾಯಪಟ್ಟಣ ತಾಲೂಕಿನ, ನುಗ್ಗೆಹಳ್ಳಿ ಹೋಬಳಿ ಹುಲಿಕೆರೆ ಗ್ರಾಮದಲ್ಲಿ 38 39 ಗೋಮಾಳ ಜಾಗವಿದ್ದು 2021to25 ರವರಿಗೆ ತಹಶೀಲ್ದಾರ್ ಕಚೇರಿ. ಹೋಬಳಿಯ ನಾಡಕಚೇರಿ. ಭೂಮಾಪಕ ಇಲಾಖೆ.
ಇವರಿಗೆ ಎಲ್ಲರಿಗೂ 38 39 ಗೋಮಳ ಜಾಗದ ಬಗ್ಗೆ 113 ಮಂಜೂರಾಗಿದ್ದು ಆದರೆ ಅಲ್ಲಿ ಸರಿಯಾದ ಫಲಾನುಭವಿಗಳಿಗೆ ಜಮೀನು ಸಿಗದೇ ಕಂಗಲಾಗಿದ್ದಾರೆ ಸ್ಥಳೀಯ ಜನರು.
ಪ್ರಭಾವಿ ವ್ಯಕ್ತಿಗಳು ಪ್ರಭಾವಕ್ಕೆ ಅಧಿಕಾರಿಗಳು ಒಳಗಾಗಿ ಬಡ ರೈತರ ಭೂಮಿ ನುಂಗಲು ಹೊಂಚು ಹಾಕುತ್ತಿದ್ದಾರೆ ಎನ್ನುವ ಅನುಮಾನ ಇಲ್ಲಿ ಮೂಡುತ್ತಿದೆ..?!
ಒಂದು ಎಕರೆಗಟ್ಟಲೆ ಖಾತೆ ಮಾಡಿಸಿಕೊಂಡು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳಿಂದ ಎಲ್ಲ ಕಚೇರಿಗಳಿಗೆ ಅರ್ಜಿಯನ್ನು ನೀಡಲಾಗಿದ್ದು ಪ್ರಯೋಜನವಾಗದೆ ರೈತರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗದೇ ಬಡ ರೈತರು ಕಂಗಾಲ ಆಗಿರುವುದು ಅಂತೂ ಸತ್ಯ.
ಆದರೆ ಈ ಸಮಯದಲ್ಲಿ ಸರಕಾರದಿಂದ ದುರಸ್ತೆ ಮಾಡುವ ಕ್ರಿಯೆಯಲ್ಲಿ ಮೊದಲನೇ ಆಯ್ಕೆ ಹುಲಿಕೆರೆ ಗ್ರಾಮವನ್ನು ಆಯ್ಕೆ ಮಾಡಿಕೊಂಡು ರೈತರಲ್ಲಿ ರೈತರಿಗೆ ಗೊಂದಲ ತಂದು ಇಡುತ್ತಿದ್ದಾರೆ ಎನ್ನುವ ಆಪಾದನೆ ಸ್ಥಳೀಯ ರೈತರಿಂದ.
ರೈತರಿಗೆ ರೈತರಿಂದ ಜಗಳ ಮಾಡಿಸುವಂತೆ ಇದೆ.!
ದುರಸ್ತೆ ಮಾಡುವ ಕ್ರಿಯೆಯಲ್ಲಿ ಭೂಮಾಪಕ ಇಲಾಖೆಯಿಂದ ಒಬ್ಬ ಭೂಮಪಕ ಅಧಿಕಾರಿಯನ್ನು ನೇಮಿಸಿದ್ದು ಅವರು ಸರಿಯಾದ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಅಳತೆ ಮಾಡದೆ ಇದರಲ್ಲಿ ಕಂದಾಯ ಇಲಾಖೆಯವರು ಭಾಗವಹಿಸಿದೆ ಇರುವುದು ಕೆಲವು ರೈತರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಿದೆ.
ಆದರೆ ಕೆಲವು ಸಮಯದಲ್ಲಿ ಈ ಅಳತೆ ಮಾಡುವ ಅಧಿಕಾರಿಗಳು ಹೋಬಳಿಯ ಕಂದಾಯ ಇಲಾಖೆಗೆ ತಿಳಿಸದೆ ಬಂದಿರುತ್ತಾರೆ ರೈತರಿಂದ ರೈತರಿಗೆ ಗೊಂದಲ ತಂದಿಡುತ್ತಿದ್ದಾರೆ ಇಲ್ಲಿಯ ಸ್ಥಳೀಯ ರೈತರಿಂದ ಆಪಾದನೆ ಹಾಗೂ ಪತ್ರಿಕೆಯ ವರದಿಗಾರರು ಇದಕ್ಕೆ ಸಂಬಂಧಪಟ್ಟ ವಿಷಯಕ್ಕೆ ಪ್ರಶ್ನೆ ಮಾಡಿದಾಗ ಅಧಿಕಾರಿಗಳ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡದೆ ಜಾರಿಕೊಂಡಿದ್ದಾರೆ ಅಧಿಕಾರಿಗಳು.!
ಇದನ್ನು ಸ್ಥಳೀಯ ರೈತರು ಖಂಡಿಸಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ಬಡ ರೈತರಿಗೆ ನ್ಯಾಯ ಸಿಗದಿದ್ದರೆ ಇದರಲ್ಲಿ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳಿಗೆ ಕಾರಣ ಎಂದು ಗ್ರಾಮಸ್ಥರು ಹಾಗೂ ರೈತರು ಆರೋಪಿಸಿದ್ದಾರೆ.
ವರದಿ: ಶಂಕ್ರೇಗೌಡ ಹುಲಿಕೆರೆ.








