ಬೆಂಗಳೂರು ಮೂಲದ ವ್ಯಕ್ತಿಗೆ 1 ಲಕ್ಷಕ್ಕೆ ಬೇಡಿಕೆ ಇಟ್ಟು 40 ಸಾವಿರ ಹಣ ಪಡಯುವಾಗ ತುಮಕೂರು ಗ್ರಾಮಾಂತರ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಕಾರ್ ವೊಂದನ್ನು ವಶಕ್ಕೆ ಪಡೆದು, ಗಾಡಿಯಲ್ಲಿ ಅನುಮಾನಾಸ್ಪದ ವಸ್ತು ಇದೆ ಎಂದು ಠಾಣೆಗೆ ತಂದಿದ್ದ ಪಿಎಸ್ಐ. ಬಳಿಕ ಕಾರ್ ಬಿಡದೆ, ಪ್ರಕರಣ ದಾಖಲಿಸದೇ ಹಣಕ್ಕೆ ಬೇಡಿಕೆ ಇಟ್ಟಿದ್ರು. ಹಣ ಕೊಡದೆ ಇದ್ದರೆ ಗಾಂಜಾ ಕೇಸ್ ಬುಕ್ ಮಾಡುವ ಬೆದರಿಕೆ ಹಾಕಿದ್ದರು ಚೇತನ್ ಕುಮಾರ್. ಒಂದು ಲಕ್ಷಕ್ಕೆ ಬೇಡಿಕೆ ಇಟ್ಟು ಬಳಿಕ 40 ಸಾವಿರಕ್ಕೆ ಫೈನಲ್ ಮಾಡಿದ್ರು. ನಿನ್ನೆ ರಾತ್ರಿ ಹಣ ತಂದು ಕೊಡುವಾಗಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಿಎಸ್ಐ ಚೇತನ್ ಕುಮಾರ್ ಅವರನ್ನ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಹಲವು ಕಾರಣಗಳಿವೆ. ಕೆಲವು ಪ್ರಮುಖವಾದವುಗಳು:
ರಾಜಕೀಯ ಹಸ್ತಕ್ಷೇಪ
ಹಣದ ಆಲೋಚನೆ
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಬದಲು ಭ್ರಷ್ಟಾಚಾರದಲ್ಲಿ ತೊಡಗುವುದು
ಜವಾಬ್ದಾರಿಯ ಕೊರತೆ
ಸಮಾಜದ ನಿರಾಸಕ್ತಿ
ಇದನ್ನು ತಡೆಯಲು, ಸರ್ಕಾರ ಮತ್ತು ಸಮಾಜದ ಸಹಕಾರ ಅಗತ್ಯ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸರಿಗೆ ತರಬೇತಿ ನೀಡಬೇಕು ಮತ್ತು ಅವರಿಗೆ ಸಾಕಷ್ಟು ಸಂಬಳ ನೀಡಬೇಕು. ಅಲ್ಲದೆ, ಪೊಲೀಸರ ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.








