ಅಖಿಲ ಕರ್ನಾಟಕ ಕೊಠಾರಿ ವೆಲ್ ಫೇರ್ ಅಸೋಸಿಯೇಷನ್ (ರಿ ) ಬೆಂಗಳೂರು ಇವರು ಸಮಸ್ತ ಸಮುದಾಯದ ಬಂಧುಗಳ ಶ್ರೇಯೋಭಿವೃದ್ಧಿಗಾಗಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಖ್ಯಾತ ಪ್ರಾರ್ಥನಾ ಸ್ಥಳವಾಗಿರುವ ಪುತ್ತಿಗೆ ಮಠದಲ್ಲಿ ದಿನಾಂಕ 14.12.2025 ರ ಭಾನುವಾರದಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ಸೂಕ್ತ ಹೋಮ, ಸಾಮೂಹಿಕ ಸತ್ಯ ನಾರಾಯಣ ಪೂಜೆ, ಸಭಾ ಕಾರ್ಯಕ್ರಮ, ಸಮುದಾಯದ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸುಪ್ರಸಿದ್ದ ಕಲಾವಿದರಿಂದ ಯಕ್ಷಗಾನ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘ( ರಿ ) ಮಂಗಳೂರು, ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ (ರಿ)ಕುಂದಾಪುರ ಅಖಿಲ ಕರ್ನಾಟಕ ಕೊಠಾರಿ ವೆಲ್ ಫೇರ್ ಅಸೋಸಿಯೇಷನ್ (ರಿ ) ಬೆಂಗಳೂರು, ಶ್ರೀ ಸತ್ಯ ನಾರಾಯಣ ವಿವಿದೋದ್ದೇಶ ಸಹಕಾರಿ ಸಂಘ ನಿಯಮಿತ ಮಂಗಳೂರು, ಶ್ರೀ ಸೀತಾರಾಮ ವಿವಿದೋದ್ದೇಶ ಸಹಕಾರಿ ಸಂಘ ನಿಯಮಿತ ಕುಂದಾಪುರ,ಕೊಟ್ಟಾರಿ ಯುವ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ,ಕೊಠಾರಿ ಯುವ ವೇದಿಕೆ ಉಡುಪಿ ಜಿಲ್ಲೆ,ಕೊಠಾರಿ ಯುವ ದ್ವನಿ ಉಡುಪಿ ಜಿಲ್ಲೆ, ಕೊಟ್ಟಾರಿ ಮಹಿಳಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ, ಕೊಠಾರಿ ಮಹಿಳಾ ಸಂಘಟನೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಗಳು,ಕೊಟ್ಟಾರಿ ಮನೆಯ ಗುರಿಕಾರರು, ಗುರು ಹಿರಿಯರು ಸಮಸ್ತ ಸಮುದಾಯ ಬಂಧುಗಳ ಉಪಸ್ಥಿತಿಯಲ್ಲಿ ಶ್ರೀ ಸೂಕ್ತ ಹೋಮ ಮತ್ತು ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ನಡೆಯಲಿದೆ.
2010 ರಲ್ಲಿ ಮಿಲನ ಎಂಬ ಕಾರ್ಯಕ್ರಮ ದ ಮೂಲಕ ಸಂಘಟಿತರಾದ ಬೆಂಗಳೂರು ಸಮುದಾಯದ ವಾಸಿಗಳು 2012 ರಲ್ಲಿ ಅಖಿಲ ಕರ್ನಾಟಕ ಕೊಠಾರಿ ವೆಲ್ ಫೇರ್ ಅಸೋಸಿಯೇಷನ್ (ರಿ ) ಬೆಂಗಳೂರು ಎಂಬ ಸಂಘವನ್ನು ಸ್ಥಾಪಿಸಿ ಅಂದಿನಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಕ್ರೀಡೋತ್ಸವದಂತಹ ಸಮಾಜಮುಖಿ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಾ 2022 ರಲ್ಲಿ ದಶಮಾನೋತ್ಸವ ಆಚರಿಸಿ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಹುಮ್ಮಸಿನಿಂದ ಸಮಾಜಕ್ಕೆ ಮಾದರಿಯಾಗಿ ಒಗ್ಗಟ್ಟಿನಿಂದ ಬೆಳೆಯುತ್ತಿರುವುದು ಯುವ ಪೀಳಿಗೆಯ ಬಲವರ್ಧನೆಗೆ ಮಾರ್ಗದರ್ಶನವಾಗಿದೆ.
ಉಭಯ ಜಿಲ್ಲೆಗಳಿಂದ ಗುರು ಹಿರಿಯರು, ಮುಖಂಡರು ಮತ್ತು ಸಮಸ್ತ ಬಂಧುಗಳು ಸೇರಿ ಸಮುದಾಯದ ಬಲವರ್ಧನೆ, ಶೈಕ್ಷಣಿಕ ಕ್ರಾಂತಿ,ಮಹಿಳೆಯರ ಸಬಲೀಕರಣ, ಉದ್ಯೋಗ,ವ್ಯವಹಾರ, ಅರೋಗ್ಯ ಪ್ರಾಪ್ತಿಗಾಗಿ ಪ್ರಾರ್ಥಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಅಖಿಲ ಕರ್ನಾಟಕ ಕೊಠಾರಿ ವೆಲ್ ಫೇರ್ ಅಸೋಸಿಯೇಷನ್ (ರಿ )ಬೆಂಗಳೂರು ಈ ಮೂಲಕ ಮನವಿ ಮಾಡಿದ್ದಾರೆ








