ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ 'ಎಸ್ಮಾ' ಜಾರಿಗೊಳಿಸಿದ ಕೇಂದ್ರ ಸರ್ಕಾರ ವಿತರಣೆ ವಿಳಂಬ ಮತ್ತು ಪೂರೈಕೆ ಕೊರತೆ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸಂಗ್ರಹಿಸಿ ಇಡುವುದನ್ನು ತಡೆಯಲು ಮತ್ತು ಸಮಾನವಾಗಿ ವಿತರಣೆ ನಡೆಯಲು ಸರ್ಕಾರವು ಕಾಯ್ದೆ ಅಡಿಯಲ್ಲಿ ಕಠಿ

11 Mar 2026
ದೇಶ

ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ 'ಎಸ್ಮಾ' ಜಾರಿಗೊಳಿಸಿದ ಕೇಂದ್ರ ಸರ್ಕಾರ

ವಿತರಣೆ ವಿಳಂಬ ಮತ್ತು ಪೂರೈಕೆ ಕೊರತೆ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸಂಗ್ರಹಿಸಿ ಇಡುವುದನ್ನು ತಡೆಯಲು ಮತ್ತು ಸಮಾನವಾಗಿ ವಿತರಣೆ ನಡೆಯಲು ಸರ್ಕಾರವು

ಕಾಯ್ದೆ ಅಡಿಯಲ್ಲಿ ಕಠಿಣಗೊಳಿಸಿದೆ.




ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ, ಭಾರತ ಸರ್ಕಾರವು ದೇಶದ ಇಂಧನ ಭದ್ರತೆಗಾಗಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು 'ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ-1968' (ESMA) ಅನ್ನು ಇಡೀ ದೇಶದಲ್ಲಿ ಜಾರಿಗೊಳಿಸಿದೆ.


ಇದರೊಂದಿಗೆ, ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಗರಿಷ್ಠ ಮಟ್ಟದ ಎಲ್‌ಪಿಜಿ ಉತ್ಪಾದನೆಗೆ ಬಳಸಿಕೊಳ್ಳುವಂತೆ ಮತ್ತು ಹೈಡ್ರೋಕಾರ್ಬನ್ ಘಟಕಗಳನ್ನು ಎಲ್‌ಪಿಜಿ ಉತ್ಪಾದನೆಯತ್ತ ತಿರುಗಿಸುವಂತೆ (Divert) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಜೊತೆಗೆ ಅಗತ್ಯ ವಸ್ತುಗಳ ಕಾಯ್ದೆ-1955 ಅನ್ನು ಸಹ ಜಾರಿಗೊಳಿಸಲಾಗಿದೆ.


ಏನಿದು ಎಸ್‌ಮಾ (ESMA) ಕಾನೂನು?


1968ರಲ್ಲಿ ಸಂಸತ್ತು ಅಂಗೀಕರಿಸಿದ ಈ ಕಾಯ್ದೆಯು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಗತ್ಯವಾದ ಸೇವೆಗಳನ್ನು ಸುಗಮವಾಗಿ ನಡೆಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗುವಂತಹ ಸಂದರ್ಭಗಳಲ್ಲಿ ಈ ಕಾನೂನನ್ನು ಅಸ್ತ್ರವಾಗಿ ಬಳಸಲಾಗುತ್ತದೆ.


ಎಸ್‌ಮಾ ಅಡಿಯಲ್ಲಿ ಬರುವ ಪ್ರಮುಖ ಸೇವೆಗಳು:


ಸಾರ್ವಜನಿಕ ಸಾರಿಗೆ (ಬಸ್, ರೈಲು ಇತ್ಯಾದಿ).


ಆರೋಗ್ಯ ಸೇವೆಗಳು (ಡಾಕ್ಟರ್, ನರ್ಸ್, ಆಸ್ಪತ್ರೆ).


ನೀರು ಸರಬರಾಜು, ನೈರ್ಮಲ್ಯ ಮತ್ತು ವಿದ್ಯುತ್ ಶಕ್ತಿ.


ಪೆಟ್ರೋಲಿಯಂ, ಕಲ್ಲಿದ್ದಲು, ಉಕ್ಕು ಮತ್ತು ರಸಗೊಬ್ಬರ ಉತ್ಪಾದನೆ ಹಾಗೂ ವಿತರಣೆ.


ಬ್ಯಾಂಕಿಂಗ್ ಮತ್ತು ಆಹಾರ ಧಾನ್ಯಗಳ ವಿತರಣಾ ವ್ಯವಸ್ಥೆ.


ನಿಯಮ ಮೀರಿದರೆ ಶಿಕ್ಷೆ ಏನು?


ಎಸ್‌ಮಾ ಜಾರಿಯಾದ ನಂತರ ಯಾವುದೇ ನೌಕರ ಅಥವಾ ಸಂಘಟನೆಗಳು ಮುಷ್ಕರ ನಡೆಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ:


ವಾರೆಂಟ್ ಇಲ್ಲದೆ ಬಂಧನ: ಯಾವುದೇ ಪೊಲೀಸ್ ಅಧಿಕಾರಿಗೆ ಮುಷ್ಕರ ನಿರತರನ್ನು ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವಿರುತ್ತದೆ.


ಜೈಲು ಮತ್ತು ದಂಡ: ನಿಯಮ ಮೀರಿದವರಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.


ಕೆಲಸದಿಂದ ವಜಾ: ಮುಷ್ಕರದಲ್ಲಿ ಪಾಲ್ಗೊಂಡ ಅಥವಾ ಪ್ರಚೋದಿಸಿದ ನೌಕರರನ್ನು ಕೆಲಸದಿಂದ ವಜಾ ಮಾಡುವ ಅಧಿಕಾರ ಸರ್ಕಾರಕ್ಕಿದೆ.


ಅವಧಿ: ಈ ಕಾನೂನನ್ನು ಒಮ್ಮೆ ಜಾರಿಗೊಳಿಸಿದರೆ ಗರಿಷ್ಠ 6 ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ.


ಅಗತ್ಯ ವಸ್ತುಗಳ ಕಾಯ್ದೆ, 1955 ಎಂದರೇನು?


ಈ ಕಾಯ್ದೆಯು ಅಗತ್ಯ ವಸ್ತುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಶಕ್ತಿ ನೀಡುತ್ತದೆ. ಕಾಳಸಂತೆ ಅಥವಾ ಅಕ್ರಮ ದಾಸ್ತಾನು ತಡೆಯುವುದು ಇದರ ಮುಖ್ಯ ಉದ್ದೇಶ. ಔಷಧಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಬೀಜಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಯುದ್ಧ ಅಥವಾ ನೈಸರ್ಗಿಕ ವಿಕೋಪದಂತಹ ಅಸಾಮಾನ್ಯ ಸಂದರ್ಭಗಳಲ್ಲಿ ಸರ್ಕಾರವು ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ.




ಗ್ಯಾಸ್ ಸಿಲಿಂಡರ್‌ಗೆ ₹915.50 ಕ್ಕಿಂತ ಹೆಚ್ಚು ಹಣ ಕೇಳ್ತಿದ್ದಾರಾ? ಸುಲಿಗೆಕೋರ ಏಜೆನ್ಸಿಗಳಿಗೆ ಬ್ರೇಕ್ ಹಾಕಲು ಹೀಗೆ ದೂರು ನೀಡಿ!



ಆ ಪ್ರಕ್ರಿಯೆ ಏನು? ಇಲ್ಲಿದೆ ವಿವರ. ಎಲ್‌ಪಿಜಿ ಸಿಲಿಂಡರ್ ಇಂದು ಪ್ರತಿಯೊಂದು ಮನೆಯ ಅಗತ್ಯವಾಗಿದೆ. ಆದರೆ ಹಲವು ಬಾರಿ ಡೀಲರ್ ಅಥವಾ ಏಜೆನ್ಸಿಯ ಸಿಬ್ಬಂದಿ ಗ್ರಾಹಕರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಅಧಿಕ ಹಣ ಕೇಳುವುದು, ಇಲ್ಲದ ಸಲ್ಲದ ಚಾರ್ಜ್‌ಗಳನ್ನು ವಿಧಿಸುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಗಲ್ಫ್ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ ಅನಿಲದ ಕೊರತೆಯಿದೆ ಎಂಬ ವದಂತಿ ಹಬ್ಬಿದ್ದೇ ತಡ, ಹಲವೆಡೆ ಸಿಲಿಂಡರ್ ಖರೀದಿಸಲು ಗ್ರಾಹಕರ ಉದ್ದನೆಯ ಸಾಲು ಕಂಡುಬರುತ್ತಿದೆ.


ಇದರ ಲಾಭ ಪಡೆಯುತ್ತಿರುವ ಕೆಲವರು 'ಡೆಲಿವರಿ ಚಾರ್ಜ್' ಹೆಸರಿನಲ್ಲಿ ಅಥವಾ 'ಕೊರತೆ ಇದೆ' ಎಂಬ ನೆಪವೊಡ್ಡಿ ಗ್ರಾಹಕರಿಂದ 100 ರಿಂದ 500 ರೂಪಾಯಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಸಮಯದಲ್ಲಿ ಜಿಲ್ಲಾ ಪೂರೈಕೆ ಅಧಿಕಾರಿ ಮತ್ತು ತೈಲ ಕಂಪನಿಗಳಿಗೆ ದೂರು ನೀಡುವ ಮೂಲಕ ಇವರ ಮನಬಂದಂತೆ ವರ್ತನೆಗೆ ಬ್ರೇಕ್ ಹಾಕಬಹುದು.


ಇಂತಹ ದೂರುಗಳನ್ನು ಇತ್ಯರ್ಥಪಡಿಸಲು ಕಂಪನಿಗಳು ಸಹ ವೇಗವಾದ ಮತ್ತು ಸರಳವಾದ ಪದ್ಧತಿಯನ್ನು ಅನುಸರಿಸುತ್ತಿವೆ. ಕೇಂದ್ರ ಸರ್ಕಾರವು ದೇಶದಲ್ಲಿ ಅಗತ್ಯ ವಸ್ತುಗಳ ಸೇವಾ ಕಾಯ್ದೆಯನ್ನು (Essential Commodities Act) ಜಾರಿಗೆ ತಂದಿದೆ.


ದೂರನ್ನು ಎಲ್ಲಿ ದಾಖಲಿಸಬೇಕು?


ಗ್ಯಾಸ್ ಡೀಲರ್ ಹೆಚ್ಚುವರಿ ಹಣ ಪಡೆಯುತ್ತಿದ್ದರೆ, ಸಿಲಿಂಡರ್ ನೀಡಲು ನಿರಾಕರಿಸುತ್ತಿದ್ದರೆ ಅಥವಾ ಇನ್ನಾವುದೇ ತೊಂದರೆ ನೀಡುತ್ತಿದ್ದರೆ ನೀವು ಈ ಕೆಳಗಿನಂತೆ ದೂರು ನೀಡಬಹುದು


ಕಂಪನಿಯ ಅಧಿಕೃತ ಪೋರ್ಟಲ್: ಇಂಡೇನ್ (Indane), ಎಚ್‌ಪಿ (HP), ಅಥವಾ ಭಾರತ್ ಗ್ಯಾಸ್ (Bharat Gas) ನಂತಹ ಸರ್ಕಾರಿ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ 'ದೂರು ವಿಭಾಗ'ದಲ್ಲಿ (Complaint Cell) ನಿಮ್ಮ ದೂರನ್ನು ದಾಖಲಿಸಲು ಅವಕಾಶವಿದೆ.


ಯಾವೆಲ್ಲಾ ದೂರುಗಳನ್ನು ನೀಡಬಹುದು?: ರೀಫಿಲ್ ಪೂರೈಕೆಯಲ್ಲಿ ವಿಳಂಬ, ಸಿಲಿಂಡರ್‌ನಲ್ಲಿ ಗ್ಯಾಸ್ ಕಡಿಮೆ ಇರುವುದು, ಹೆಚ್ಚುವರಿ ಹಣ ವಸೂಲಿ, ಕಳಪೆ ಸೇವೆ ಅಥವಾ ಆನ್‌ಲೈನ್ ಪಾವತಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು. ನೀವು ದೂರು ಸಲ್ಲಿಸಿದ ನಂತರ ಕಂಪನಿಯು ಏಜೆನ್ಸಿ ಮೇಲೆ ಕ್ರಮ ಕೈಗೊಳ್ಳುತ್ತದೆ ಮತ್ತು ಆ ಕುರಿತ ಮಾಹಿತಿಯನ್ನು ನಿಮಗೆ ನೀಡುತ್ತದೆ.


ಜಿಲ್ಲಾ ಪೂರೈಕೆ ಅಧಿಕಾರಿ (DSO): ನೀವು ನೇರವಾಗಿ ಜಿಲ್ಲಾಧಿಕಾರಿ ಕಚೇರಿಯ ಅಡಿಯಲ್ಲಿ ಬರುವ ಜಿಲ್ಲಾ ಪೂರೈಕೆ ಅಧಿಕಾರಿಗಳಿಗೂ ದೂರು ನೀಡಬಹುದು. ಇವರು ಪೂರೈಕೆ ವಿಭಾಗದ ಮುಖ್ಯಸ್ಥರಾಗಿರುತ್ತಾರೆ.


ಈ ಮಾಹಿತಿಯನ್ನು ಮರೆಯಬೇಡಿ


ಆನ್‌ಲೈನ್‌ನಲ್ಲಿ ದೂರು ದಾಖಲಿಸುವಾಗ ಗ್ರಾಹಕರು ಕೆಲವು ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಅದರಲ್ಲಿ ಪ್ರಮುಖವಾಗಿ LPG ID, ಆ ನಂತರ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಗ್ರಾಹಕ ಸಂಖ್ಯೆ ಈ ಮಾಹಿತಿಯ ಆಧಾರದ ಮೇಲೆ ಕಂಪನಿಯು ಗ್ರಾಹಕರನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ದೂರು ನೀಡಿದ ನಂತರ ಅದರ ಸ್ಥಿತಿಗತಿಯನ್ನು ಸಹ ನೀವು ಪರಿಶೀಲಿಸಬಹುದು.


Recently Updated:

ಉಚಿತ ಕೊಡುಗೆಗಳು ಖಂಡಿಸಿದ  ಸುಪ್ರೀಂ ಕೋರ್ಟ್ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಎಚ್ಚರಿಸಿದ ನ್ಯಾಯ ಪೀಠ.ಉಚಿತ ಕೊಡುಗೆಗಳು ಖಂಡಿಸಿದ ಸುಪ್ರೀಂ ಕೋರ್ಟ್ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಎಚ್ಚರಿಸಿದ ನ್ಯಾಯ ಪೀಠ.
ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್. ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್.
ಹೊಸದಿಲ್ಲಿ ಜು25: ಆರೆಸಸ್ ಮತ್ತು ಮುಸ್ಲಿಂ ಧರ್ಮಗುರುಗಳು ಸಭೆ. ಹೊಸದಿಲ್ಲಿ ಜು25: ಆರೆಸಸ್ ಮತ್ತು ಮುಸ್ಲಿಂ ಧರ್ಮಗುರುಗಳು ಸಭೆ.
ಆಪರೇಷನ್ ಸಿಂಧೂರ್' ಪಾಕಿಸ್ತಾನದ 100 ಕಿಮೀ ಒಳಗೆ ನುಗ್ಗಿ ಹೊಡೆದು ಸೇಡು ತೀರಿಸಿಕೊಂಡ ಭಾರತೀಯ ಸೇನೆ..!! `ಆಪರೇಷನ್ ಸಿಂಧೂರ್' ಪಾಕಿಸ್ತಾನದ 100 ಕಿಮೀ ಒಳಗೆ ನುಗ್ಗಿ ಹೊಡೆದು ಸೇಡು ತೀರಿಸಿಕೊಂಡ ಭಾರತೀಯ ಸೇನೆ..!! `
ಮೋಹನ್ ಭಾಗವತ್, ಮುಸ್ಲಿಮರು ಸಹ RSS ಸೇರಬಹುದು, ಆದ್ರೆ ಕಂಡೀಷನ್ ಅಪ್ಲೈ.ಮೋಹನ್ ಭಾಗವತ್, ಮುಸ್ಲಿಮರು ಸಹ RSS ಸೇರಬಹುದು, ಆದ್ರೆ ಕಂಡೀಷನ್ ಅಪ್ಲೈ.
ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ..! ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ..!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಮಾಜಿ ಮುಖ್ಯಮಂತ್ರಿ  ಪುತ್ರ ಪರ್ವೇಶ್ ವರ್ಮಾ..!ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಮಾಜಿ ಮುಖ್ಯಮಂತ್ರಿ ಪುತ್ರ ಪರ್ವೇಶ್ ವರ್ಮಾ..!
3000 ರೂ. ಪಾವತಿಸಿದ್ರೆ  ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಫ್ರೀ3000 ರೂ. ಪಾವತಿಸಿದ್ರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಫ್ರೀ
ಬಜೆಟ್ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ.ಬಜೆಟ್ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ.